ಕಾಸರಗೋಡು: ಮೂಢನಂಬಿಕೆ ಮತ್ತು ಅನೈತಿಕತೆಯಿಂದ ಮುಖ್ಯಮಂತ್ರಿ ಪಿಣರಾಯಿವಿಜಯನ್ ನೇತೃತ್ವದ ಸರ್ಕಾರ ಕೇರಳವನ್ನು ಅಧೋಗತಿಗೆ ಕೊಂಡೊಯ್ದಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ವಿ.ರಾಜನ್ ತಿಳಿಸಿದ್ದರೆ.
ಅವರು ಚೆಮ್ನಾಡ್‍ನ ಪರವನಡ್ಕದ ಬಿಜೆಪಿ ಬೂತ್ ಸಮಿತಿ ನೇತೃತ್ವದಲ್ಲಿ ಬಿಜೆಪಿಯ ಹಿರಿಯ ಮುಖಂಡ ನಂಜಿಲ್ ಕುಞÂರಾಮನ್ ಅವರ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೂಢನಂಬಿಕೆಗಳ ವಿರುದ್ಧ ಪ್ರತಿಕ್ರಿಯಿಸಲು ಸಿಪಿಎಂ ರಾಜ್ಯ ನಾಯಕತ್ವ ಸಿದ್ಧವಾಗಬೇಕು ಎಂದು ತಿಳಿಸಿದರು. ಪರವನಡ್ಕ ಬೂತ್ ಸಮಿತಿ ಅಧ್ಯಕ್ಷ ಪಿ.ರವೀಂದ್ರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಸಂಸ್ಮರಣಾ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಎನ್. ಬಾಬುರಾಜ್, ಉದುಮ ಕ್ಷೇತ್ರದ ಅಧ್ಯಕ್ಷ ಕೆ.ಟಿ. ಪುರುಷೋತ್ತಮನ್, ಉಪಾಧ್ಯಕ್ಷರುಗಳಾದ ಸದಾಶಿವನ್ ಮಣಿಯಂಗಾನಂ, ತ್ಯಾಂಪನ್ ಆಚೇರಿ, ಕಾರ್ಯದರ್ಶಿ ಮಣಿಕಂಠನ್ ಚಟ್ಟೇಂಗೆ,ಜಿಲ್ಲಾ ಸಮಿತಿ ಸದಸ್ಯ ವೈ. ಕೃಷ್ಣದಾಸ್, ಶೈನಿ ಯೆಮಲ್, ವಿನಯಕುಮಾರ್ ಕೋಟಿಕುಳಂ ಉಪಸ್ಥಿತರಿದ್ದರು. ಚೆಮ್ನಾಡ್ ಬೂತ್ ಸಮಿತಿ ಅಧ್ಯಕ್ಷ ಪಿ.ಪದ್ಮನಾಭನ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಗೋಪಿನಾಥ್ ವಂದಿಸಿದರು.
ಮೂಢನಂಬಿಕೆ, ಅನೈತಿಕತೆಯಿಂದ ಅಧೋಗತಿಯತ್ತ ಸಾಗುತ್ತಿರುವ ಕೇರಳ: ಬಿಜೆಪಿ
0
ಅಕ್ಟೋಬರ್ 17, 2022
Tags