ಬದಿಯಡ್ಕ: ಹಾವು ಕಡಿದು ಬದಿಯಡ್ಕ ಚೇಡೇಕಲ್ ಬಳಿಯ ಪಟ್ಟಾಜೆ ನಿವಾಸಿ, ಯುವ ಇಂಜಿಯರ್ ಮೃತಪಟ್ಟ ಘಟನೆ ನಡೆದಿದೆ
ಪಟ್ಟಾಜೆ ಗೋಪಾಲ ಕೃಷ್ಣ ಭಟ್ ಅವರ ಪುತ್ರ ಪಿ.ಜಿ.ಕೃಷ್ಣಕುಮಾರ್ (27) ಮೃತರು. ಭಾನುವಾರ ಸಂಜೆ ಘಟನೆ ನಡೆದಿದೆ. ಮನೆ ಪರಿಸರದಲ್ಲಿ ಹಾವು ಕಚ್ಚಿದ್ದು, ಅಲ್ಪಹೊತ್ತಲ್ಲಿ ಮೃತರಾದರು. ಅವರು ಚೆನ್ನೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು. ತಾಯಿ ತಿರುಮಲೇಶ್ವರಿ ಈ ಹಿಂದೆಯೇ ತೀರಿಕೊಂಡಿದ್ದರು.ಮೃತರು ತಂದೆ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.