ಪೆರ್ಲ: ಮತ್ರ್ಯ ಪೆರ್ಲ ಜಮಾಯತ್ ಸಮಿತಿಯ ಇಸ್ಲಾಮಿಕ್ ಫ್ರೀ ಸ್ಕೂಲ್ ನ ವಿದ್ಯಾರ್ಥಿ ಫೆಸ್ಟ್ ಕಾರ್ಯಕ್ರಮ ಪೆರ್ಲ ಪೇಟೆ ಮಸೀದಿ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎ.ಕೆ.ಹಸೈನಾರ್ ಹಾಜಿ ಪೆರ್ಲ ಅಧ್ಯಕ್ಷತೆವಹಿಸಿದ್ದರು. ಮುಹಮ್ಮದಾಲಿ ಪೆರ್ಲ,ಅಬ್ದುಲ್ ರಝಾಕ್ ಹಾಜಿ ಮತ್ರ್ಯ, ಅಬ್ದುಲ್ ರಹಮಾನ್ ನೂರ, ಅಬ್ಬುಬ್ಬಕ್ಕರ್ ಪೆರ್ದನೆ,ಉಸ್ತಾದ್ ಮಹಮ್ಮದ್ ದಾರಿಮಿ ಕೊಲ್ಲಂ, ಅಬ್ದುಲ್ಲ ಇಂಡಿಯನ್, ಶೇರಿಫ್ ಎ.ಕೆ,ಹಮೀದ್ ಮತ್ರ್ಯ ಮೊದಲಾದವರು ಉಪಸ್ಥಿತರಿದ್ದರು. ನವಾಸ್ ಮತ್ರ್ಯ ಸ್ವಾಗತಿಸಿ ಶಾಹುಲ್ ಹಮೀದ್ ಅಜಿಲಡ್ಕ ವಂದಿಸಿದರು.ಆಶ್ರಫ್ ಮತ್ರ್ಯ ನಿರೂಪಿಸಿದರು. ಬಳಿಕ ವಿಧ್ಯಾರ್ಥಿಗಳ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಪ್ರದರ್ಶನ ಜರಗಿತು.
ಪೆರ್ಲದಲ್ಲಿ ಇಸ್ಲಾಮಿಕ್ ಫ್ರೀ ಸ್ಕೂಲ್ ವಿದ್ಯಾರ್ಥಿ ಫೆಸ್ಟ್
0
ಅಕ್ಟೋಬರ್ 09, 2022
Tags