ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಜೀರ್ಣೋದ್ಧಾರ ಕಾರ್ಯಗಳು ದಾನಿಗಳ ಹಾಗೂ ಭಕ್ತಾದಿಗಳ ನೆರವಿನಿಂದ ನಡೆದುಬರುತ್ತಿದೆ. ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳ ಪ್ರಾಯೋಜಕತ್ವ ವಹಿಸಿಕೊಂಡಿರುವ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಕೆ.ಕೆ ಶೆಟ್ಟಿ ಮುಂಡಪಳ್ಳ ಇತ್ತೀಚೆಗೆ ದೇಗುಲಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು, ಕಾಮಗಾರಿಗಳನ್ನು ವೀಕ್ಷಿಸಿದರು. ಇಬ್ಬರೂ ದಾನಿಗಳು ರಾಜಾಂಗಣ ಕಾಮಗರಿ ಮತ್ತು ಗೋಪುರಗಳಿಗೆ ಶಿಲೆ ಅಳವಡಿಸುವ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರು ಇಬ್ಬರೂ ದಾನಿಗಳಿಗೆ ಶ್ರೀದೇವರ ಪ್ರಸಾದ ವಿತರಿಸಿದರು. ನವೀಕರಣ ಸಮಿತಿ ಉಪಾಧ್ಯಕ್ಷ ಡಾ. ಬಿ.ಎಸ್ ರಾವ್, ಕಾರ್ಯದರ್ಶಿ ಜಯದೇವ ಖಂಡಿಗೆ, ಐ.ಎನ್. ರೈ, ಮಂಜುನಾಥ ಕಾಂತ್, ಮುರಳಿ ಗಟ್ಟಿ, ನರಾಯಣಯ್ಯ, ಮನೋಹರ ಎ, ಬಿ.ಎನ್ ಸುಬ್ರಹ್ಮಣ್ಯ, ಕೆ.ಎಸ್ ಮಧ್ಯಸ್ಥ ಉಪಸ್ಥಿತರಿದ್ದರು.
ಮಧೂರು ದೇವಸ್ಥಾನ ಜೀರ್ಣೋದ್ಧಾರ: ದಾನಿಗಳಿಂದ ಕಾಮಗಾರಿ ಅವಲೋಕನ
0
ಅಕ್ಟೋಬರ್ 16, 2022
Tags