ಕಾಸರಗೋಡು: ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಚಿತ್ರರಚನಾ ಸ್ಪರ್ಧೆ ಜಿಲ್ಲಾಧಿಕಾರಿ ಕಚೇರಿಯ ಮಾಹಿತಿ ಇಲಾಖೆ ಕಚೇರಿ ಸಭಾಂಗಣದಲ್ಲಿ ನಡೆಯಿತು. ಯುಪಿ ವಿಭಾಗಕ್ಕಾಗಿ 'ಮಾದಕ ದ್ರವ್ಯದ ವಿರುದ್ಧ ಕೈಜೋಡಿಸೋಣ'ಎಂಬ ಸಂದೇಶದೊಂದಿಗೆ ಜಲವರ್ಣ ಸ್ಪರ್ಧೆ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಭಿತ್ತಿಪತ್ರ ಬರೆಯುವ ಸ್ಪರ್ಧೆಯನ್ನು ನಡೆಸಲಾಯಿತು.
ಪ್ರೌಢಶಾಲಾ ವಿಭಾಗದ ಪೆÇೀಸ್ಟರ್ ಸ್ಪರ್ಧೆಯಲ್ಲಿ ಪಾಲಕುನ್ನು ಅಂಬಿಕಾ ಆಂಗ್ಲ ಮಾಧ್ಯಮ ಶಾಲೆಯ ರಿಷಿ ಕೃಷ್ಣನ್ ಪ್ರಥಮ, ತೋಮಪುರಂ ಸೆಂಟೋಮಾಸ್ ಎಚ್.ಎಸ್.ನ ಜಿಯೋ ವರ್ಗೀಸ್ ಸಿಜು ದ್ವಿತೀಯ, ಕೇಂದ್ರೀಯ ವಿದ್ಯಾಲಯ ನಂ.2ರ ಎಂ.ಕನಿಹಾ ಕೃಷ್ಣನ್ ತೃತೀಯ ಬಹುಮಾನ ಪಡೆದರು.
ಯುಪಿ ವಿಭಾಗದ ಜಲವರ್ಣ ಸ್ಪರ್ಧೆಯಲ್ಲಿ ಉದುಮ ಜಿಎಚ್‍ಎಸ್ ವಿದ್ಯಾರ್ಥಿ ಪಿ.ಎಸ್.ದೇವದರ್ಶನ್ ಪ್ರಥಮ ಬಹುಮಾನ ಪಡೆದರೆ, ಪೆರಿಯ ನವೋದಯ ವಿದ್ಯಾರ್ಥಿಗಳಾದ ಪಿ. ವೇದಾ ದ್ವಿತೀಯ ಹಾಗೂ ಕೆ.ಪಿ. ದೇವಾನಂದ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆದ ಗಾಂಧಿ ಜಯಂತಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆಗಳನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ವಿತರಿಸಿದರು.
ಮಾದಕ ದ್ರವ್ಯ ವಿರುದ್ಧ ಚಿತ್ರರಚನೆ, ಭಿತ್ತಿಪತ್ರ ರಚನಾ ಸ್ಪರ್ಧೆ
0
ಅಕ್ಟೋಬರ್ 12, 2022