ಮಂಜೇಶ್ವರ: ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ಮಂಜೇಶ್ವರ ಕಡಂಬಾರ್ ತಳೇಕಳ ಸದಾಶಿವ ದೇವಸ್ಥಾನದಲ್ಲಿ ಖಾಲಿ ಇರುವ ಪಾರಂಪರ್ಯೇತರ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನ ಪರಿಸರದ ಹಿಂದೂ ಧರ್ಮೀಯರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ನವೆಂಬರ್ 10 ರಂದು ಸಂಜೆ 5 ಗಂಟೆಯೊಳಗೆ ಸಹಾಯಕ ಆಯುಕ್ತರು, ನೀಲೇಶ್ವರ, ಮಲಬಾರ್ ದೇವಸ್ವಂ ಬೋರ್ಡ್, ಕಾಸರಗೋಡು ವಿಭಾಗ ಇವರ ಕಛೇರಿಯಲ್ಲಿ ಸ್ವೀಕರಿಸಬೇಕು. ಅರ್ಜಿ ನಮೂನೆಯನ್ನು ಮಲಬಾರ್ ದೇವಸ್ವಂ ಬೋರ್ಡ್ ವೆಬ್‍ಸೈಟ್, ಸಹಾಯಕ ಆಯುಕ್ತರ ಕಚೇರಿ, ನೀಲೇಶ್ವರನಿಂದ ಎಲ್ಲಾ ಕರ್ತವ್ಯದ ದಿನಗಳಂದು ಉಚಿತವಾಗಿ ಪಡೆಯಬಹುದು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.
ಪಾರಂಪರ್ಯೇತರ ಟ್ರಸ್ಟಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ
0
ಅಕ್ಟೋಬರ್ 20, 2022
Tags