ಬದಿಯಡ್ಕ: ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಮುಳ್ಳೇರಿಯ ಜಿವಿಎಚ್‍ಎಸ್ ಶಾಲೆಯ ಎನ್.ಎಸ್.ಎಸ್. ವಿದ್ಯಾರ್ಥಿಗಳು ಒಂದು ದಿನದ ಶಿಬಿರ ನಡೆಸಿದರು. ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಶುಚೀಕರಣ, ಕಾಡುಪೊದೆಗಳ ತೆರವು ಕಾರ್ಯ ನಡೆಯಿತು. ಆಶ್ರಮವಾಸಿಗಳಿಗೆ ಎನ್.ಎಸ್.ಎಸ್. ಘಟಕದ ವತಿಯಿಂದ ಬಟ್ಟೆಬರೆಗಳನ್ನು ನೀಡಿದರು. ಯೋಜನಾ ಕಾರ್ಯಕ್ರಮ ಅಧಿಕಾರಿ ಶ್ರೀಜಿತ್, ಪ್ರಾಂಶುಪಾಲ ರಘುರಾಮ್, ನಿವೃತ್ತ ಪ್ರಾಂಶುಪಾಲ ಶಶಿರಾಜ ನೀಲಂಗಳ ನೇತೃತ್ವ ವಹಿಸಿದ್ದರು.
ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಮುಳ್ಳೇರಿಯ ಎನ್.ಎಸ್.ಎಸ್. ಘಟಕದಿಂದ ಶುಚೀಕರಣ
0
ಅಕ್ಟೋಬರ್ 17, 2022
Tags