ಕಾಸರಗೋಡು: ಮಲಬಾರ್‍ನಿಂದ ಬೆಂಗಳೂರಿಗೆ ತೆರಳಲು ಮತ್ತು ಹಿಂತಿರುಗಲು ಹಗಲು ರೈಲು ಸೇವೆ ಒದಗಿಸುವಂತೆ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ರೈಲ್ವೆ ಮಂಡಳಿ ಅಧ್ಯಕ್ಷರು, ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ಮತ್ತು ಪಾಲಕ್ಕಾಡ್ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕರನ್ನು ಪತ್ರದ ಮುಲಕ ಒತ್ತಾಯಿಸಿದ್ದಾರೆ.
ಪ್ರಸಕ್ತ ಒಟ್ಟು ಎರಡು ರಾತ್ರಿ ರೈಲುಗಳು ಮಾತ್ರ ಇದ್ದು, (ಒಂದು ಮಂಗಳೂರು ಮೂಲಕ ಮತ್ತು ಇನ್ನೊಂದು ಕಣ್ಣೂರು - ಯಶವಂತಪುರ ಎಕ್ಸ್‍ಪ್ರೆಸ್).
ಕಣ್ಣೂರು/ಕೋಝಿಕೋಡ್‍ನಿಂದ ಒಂದು ಹಗಲು ವೇಳೆ ರೈಲಿಗೆ ಬೇಡಿಕೆ ಹೆಚ್ಚಾಗಿದೆ. ಯಶವಂತಪುರ ಎಕ್ಸ್‍ಪ್ರೆಸ್‍ನಲ್ಲಿ ಒಟ್ಟು 1508 ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಾರೆ. ಅದರ ದುಪ್ಪಟ್ಟು ಜನ ಸೀಟು ಸಿಗದೆ ಹೊರಗುಳಿಯುವಂತಾಘುತ್ತದೆ. ಕೆಲವರು ಖಾಸಗಿ ವಾಹನಗಳಲ್ಲಿ ವೀರಾಜಪೇಟೆ ಮಾರ್ಗವಾಗಿ ಹಾಗೂ ಇನ್ನು ಕೆಲವರು ದುಬಾರಿ ಹಣ ತೆತ್ತು ಇತರ ಬಸ್‍ಗಳಲ್ಲಿ ಬೆಂಗಳೂರಿಗೆ ತೆರಳಬೇಕಾಗುತ್ತಿದೆ.
ಇದನ್ನು ಹೋಗಲಾಡಿಸಲು ಮಲಬಾರ್‍ಗೆ ದಿನನಿತ್ಯದ ರೈಲು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ತ್ರಿಕರಿಪುರ ಮತ್ತು ಮಂಜೇಶ್ವರದಂತಹ ಪ್ರದೇಶಗಳಿಂದ ಹೆಚ್ಚಿನ ಪ್ರಯಾಣಿಕರು ಬೆಂಗಳೂರಿಗೆ ತೆರಳುತ್ತಿದ್ದಾರೆ. ರೈಲು ಪ್ರಯಾಣವನ್ನು ಅವಲಂಬಿಸಿರುವ ಈ ಪ್ರಯಾಣಿಕರಿಗೆ ಪ್ರಸ್ತುತ ಪ್ರಮುಖ ರೈಲುಗಳಿಗೆ ನಿಲುಗಡೆಯಿಲ್ಲದ ತ್ರಿಕರಿಪುರ ಮತ್ತು ಮಂಜೇಶ್ವರಂ ನಿಲ್ದಾಣಗಳಲ್ಲಿ ರೈಲುಗಳಿಗೆ ನಿಲುಗಡೆ ಒದಗಿಸಲೂ ಕ್ರಮಕೈಗೊಳ್ಳುವಂತೆ ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಸಂಸದರ ಪ್ರಕಟಣೆ ತಿಳಿಸಿದೆ.
ಬೆಂಗಳೂರಿಗೆ ಹಗಲು ರೈಲು ಸೇವೆ: ಸಂಸದರಿಂದ ರೈಲ್ವೆ ಮಂಡಳಿಗೆ ಪತ್ರ
0
ಅಕ್ಟೋಬರ್ 19, 2022
Tags