ತಿರುವನಂತಪುರ: ರಾಜಧಾನಿಯಲ್ಲಿ ನಿμÉೀಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ನ ಧ್ವಜಗಳು ಪತ್ತೆಯಾಗಿವೆ. ತಿರುವನಂತಪುರದ ಅಟ್ಟಕುಳಂಗರದಲ್ಲಿ ಪಾಪ್ಯುಲರ್ ಫ್ರಂಟ್ ನ ಧ್ವಜಗಳನ್ನು ಕಟ್ಟಲಾಗಿದೆ.
ನಿಷೇಧವಿದ್ದರೂ ಧಾರ್ಮಿಕ ಭಯೋತ್ಪಾದಕ ಸಂಘಟನೆಯ ಬಾವುಟಗಳು ಮತ್ತೆ ಕಾಣಿಸಿಕೊಳ್ಳಲು ಸರಕಾರದ ಮೌನವೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಆದರೆ ನಿಷೇಧಿತ ಸಂಘಟನೆಯ ಧ್ವಜದ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅವರು ಪಾಪ್ಯುಲರ್ ಫ್ರಂಟ್ ಬೆಂಬಲಿಗರಾಗಿರಬಹುದು ಎಂಬುದು ಪ್ರಾಥಮಿಕ ತೀರ್ಮಾನ. ಘಟನೆ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
28ರಂದು ಕೇಂದ್ರ ಗೃಹ ಸಚಿವಾಲಯ ಪಾಪ್ಯುಲರ್ ಫ್ರಂಟ್ ಅನ್ನು ನಿಷೇಧಿಸಿತ್ತು. ಇದರ ನಂತರ ದೇಶಾದ್ಯಂತ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದವು. ಎನ್‍ಐಎ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಲವು ನಾಯಕರನ್ನು ಬಂಧಿಸಿದೆ. ಆದರೆ ಪಾಪ್ಯುಲರ್ ಫ್ರಂಟ್ ಬಗ್ಗೆ ಕೇರಳ ಸರಕಾರ ಇನ್ನೂ ಮೃದು ಧೋರಣೆ ತಾಳಿದೆ ಎಂಬ ಆರೋಪಗಳೂ ಇವೆ.
ತಿರುವನಂತಪುರದಲ್ಲಿ ಮತ್ತೆ ಕಾಣಿಸಕೊಂಡ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ನ ಧ್ವಜಗಳು
0
ಅಕ್ಟೋಬರ್ 05, 2022