ಕಾಸರಗೋಡು: ಆದಿವಾಸಿಗಳಿಗೆ ಒಂದು ಎಕರೆ ಕೃಷಿ ಭೂಮಿ ನೀಡುವ ಭರವಸೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಆರ್‍ಎಸ್‍ಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಗೋತ್ರ ಜನತಾ ಭೂಸಮರ ಸಮಿತಿಯ ಬೆಂಬಲದೊಂದಿಗೆ ನಡೆದ 24 ಗಂಟೆಗಳ ಉಪವಾಸ ಸತ್ಯಾಗ್ರಹ ಪೂರ್ಣಗೊಂಡಿತು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಸತ್ಯಾಗ್ರಹ ನಿರತರಿಗೆ ಲಿಂಬೆ ಹಣ್ಣಿನ ರಸ ನೀಡುವ ಮೂಲಕ ಸಮಾರಂಭ ಉದ್ಘಾಟಿಸಿದರು. ಆದಿವಾಸಿ ಗೋತ್ರ ಜನತಾ ಭೂ ಸಮರ ಸಮಿತಿ ಸಂಚಾಲಕ ಕೃಷ್ಣನ್ ಪರಪ್ಪಚ್ಚಾಲ್ ಅಧ್ಯಕ್ಷತೆ ವಹಿಸಿದ್ದರು. ರಿಜೋ ಚೆರುವತ್ತೂರು, ಕೆ. ಎ. ಶಾಲು, ಸಿ. ರಾಮಚಂದ್ರನ್ ನಾಯರ್, ಹರ್ಷಾದ್ ಪೆÇವ್ವಲ್, ರಾಘವನ್ ಮೇಲ್ಪರಂಬ, ಮ್ಯಾಥ್ಯೂ ಕಳತ್ತೂರು, ಕೆ. ಶ್ರೀಕಾಂತ್, ನಿತಿನ್ ಎಣ್ಮಕಜೆ, ನಾರಾಯಣನ್ ಕಾವುಂಗಾಲ್, ಸುಮೇಶ್ ಕೊನ್ನಕ್ಕಾಡ್, ರಮೇಶನ್ ಮಲಯಾತುಕರ ಮತ್ತು ಕೃಷ್ಣನ್ ವೆಳ್ಳಾಲ್ ಉಪಸ್ಥಿತರಿದ್ದರು. ಆರ್‍ಎಸ್‍ಪಿ ಜಿಲ್ಲಾ ಕಾರ್ಯದರ್ಶಿ ಹರೀಶ್ ಬಿ ನಂಬಿಯಾರ್ ಸ್ವಾಗತಿಸಿದರು.
ಗೋತ್ರ ಜನತಾ ಭೂಸಮರ ಸಮಿತಿ ಸತ್ಯಾಗ್ರಹ ಸಂಪನ್ನ
0
ಅಕ್ಟೋಬರ್ 12, 2022
Tags