HEALTH TIPS

ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಅನುವಾದ ಕಾರ್ಯಾಗಾರ, ಬಹುಭಾಷಾ ಕವಿ ಸಂಗಮ


             ಕಾಸರಗೋಡು: ನಾಟ್ಯರತ್ನಂ ಕಣ್ಣನ್ ಪಾಟಾಳಿ ಕಥಕ್ಕಳಿ ಟ್ರಸ್ಟ್(ರಿ), ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಮಲಯಾಳ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿಯ ಸಹಕಾರದೊಂದಿಗೆ ಅ. 13ರಿಂದ 15ರ ವರೆಗೆ ಅನುವಾದ ಕಾರ್ಯಾಗಾರ ಮತ್ತು ಬಹುಭಾಷಾ ಕವಿ ಸಂಗಮ ಕಾರ್ಯಕ್ರಮ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಜರುಗಲಿದೆ.
             ತಜ್ಞ ಅನುವಾದಕರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಮತ್ತು ಸವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹುಭಾಷಾ ಕವಿ ಸಂಗಮದಲ್ಲಿ ಕನ್ನಡ, ಮಲಯಾಳ, ತುಳು, ಬ್ಯಾರಿ, ಮರಾಟಿ, ಶಿವಳ್ಳಿ, ಹವ್ಯಕ, ಕರಾಡ, ಕೊಂಕಣಿ, ತಮಿಳು, ತೆಲುಗು ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆಗಳ ನೂರಕ್ಕೂ ಹೆಚ್ಚು ಮಂದಿ ಕವಿಗಳು ಪಾಲ್ಗೊಳ್ಳುವರು.
             ಅ. 13ರಂದು ಬೆಳಗ್ಗೆ ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ಕಾಲೇಜು ಪ್ರಾಂಶುಪಾಲೆ  ಡಾ. ರಮಾ ಎಂ. ಅಧ್ಯಕ್ಷತೆ ವಹಿಸುವರು. ಕಣ್ಣೂರು ವಿವಿ ದೂರಶೀಕ್ಷಣ ಕೇಂದ್ರದ ನಿವೃತ್ತ ನಿರ್ದೇಶಕ ಹಾಗೂ ಕಥಕ್ಕಳಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಎಂ ಶ್ರೀಧರನ್ ಪ್ರಾಸ್ತಾವಿಕ ಮಾತುಗಳನ್ನಾಡುವರು. ಬೆಂಗಳೂರು ನ್ಯಾಶನಲ್ ಕಾಲೇಜು ನಿವೃತ್ತ ಪ್ರಾಧ್ಯಾಪಕ ಪ್ರೊ. ಪ್ರಮೋದ್ ಮುತಾಲಿಕಾ, ಕಣ್ಣೂರು ವಿ.ವಿ ಸದಸ್ಯ ಪ್ರೊ. ಎಂ.ಸಿ ರಾಜು ಮುಖ್ಯ ಅತಿಥಿಗಳಾಗಿ ಬಾಗವಹಿಸುವರು. ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ದಿಕ್ಸೂಚಿ ಭಾಷಣ ಮಾಡುವರು.  ನಂತರ ವಿವಿಧ ಗೋಷ್ಠಿಗಳು ನಡೆಯುವುದು.
14ರಂದು ನಡೆಯುವ ಕಥಕ್ಕಳಿ ಪ್ರಾತ್ಯಕ್ಷಿಕೆ ಪ್ರಯೋಗವನ್ನು ಕೇರಳ ಫೋಕ್ಲೋರ್ ಅಕಾಡಮಿ ಕಾರ್ಯಕಾರಿ ಸಮಿತಿ ಸದಸ್ಯ, ಮಾಜಿ ಶಾಸಕ ಕೆ.ವಿ ಕುಞÂರಾಮನ್ ಉದ್ಘಾಟಿಸುವರು. ಡಾ. ಎ.ಎಂ ಶ್ರೀಧರನ್ ಅವರ ಅಧ್ಯಕ್ಷತೆ ವಹಿಸುವರು. ಅ.15ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಭಾಷೆಗಳು-ವಿವಿಧ ಆಯಾಮಗಳು ಎಂಬವ ವಿಷಯದಲ್ಲಿ ಸಂವಾದ ನಡೆಯುವುದು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸುವರು. ನಂತರ ನಡೆಯುವ ಕವಿಗೋಷ್ಠಿಯಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭವನ್ನು ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸುವರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಕಣ್ಣೂರು ವಿವಿ ಉಪಕುಲಪತಿ ಪ್ರೊ. ಸಾಬು ಸಮಾರೋಪ ಭಾಷಣ ಮಾಡುವರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries