ಮುಂಬೈ: ಗುರುವಾರ ಬೆಳಗ್ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಆರಂಭಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆಯಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ವಿದೇಶಿ ಬಂಡವಾಳದ ಹೊರಹರಿವು ಮತ್ತು ವಿದೇಶಿ ನಿಧಿಯ ಹೊರಹರಿವು ಬಲವಾದ ಕಾರಣದಿಂದ ಭಾರತದ ರೂಪಾಯಿ ಮೌಲ್ಯವು 6 ಪೈಸೆ ಕುಸಿದು ಯುಎಸ್ ಡಾಲರ್ ವಿರುದ್ಧ ದಾಖಲೆಯ 83.06 ಕ್ಕೆ ಇಳಿಕೆಯಾಯಿತು.
ಇದಲ್ಲದೆ, ದೇಶೀಯ ಷೇರುಗಳಲ್ಲಿನ ಮಾರಾಟ ಮತ್ತು ತೀವ್ರ ನಷ್ಟವುಂಟಾಗಬಹುದೆಂಬ ಷೇರುದಾರರ ಆತಂಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತು ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ. ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 83.05 ನಲ್ಲಿ ದುರ್ಬಲವಾಗಿ ಇಂದಿನ ವಹಿವಾಟು ಆರಂಭಿಸಿತು. ನಂತರ ಮತ್ತಷ್ಟು ಕುಸಿಯಿತು.
ಆರಂಭಿಕ ವ್ಯವಹಾರಗಳಲ್ಲಿ ಸ್ಥಳೀಯ ಕರೆನ್ಸಿಯು 83.07 ರ ಗರಿಷ್ಠ ಮಟ್ಟವನ್ನು ಮುಟ್ಟಿತು. ಮೊನ್ನೆ ಮಂಗಳವಾರ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 60 ಪೈಸೆ ಕುಸಿದು 83ಕ್ಕೆ ತಲುಪಿತ್ತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 0.17 ಶೇಕಡಾ USD 92.25 ಕ್ಕೆ ಇಳಿದಿದೆ. ದೇಶೀಯ ಷೇರು ಮಾರುಕಟ್ಟೆಯಲ್ಲಿ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 140.09 ಪಾಯಿಂಟ್ ಅಥವಾ 0.24 ಶೇಕಡಾ ಕಡಿಮೆಯಾಗಿ 58,967.10 ರಲ್ಲಿ ವಹಿವಾಟು ನಡೆಸಿತು.
ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ 43.95 ಪಾಯಿಂಟ್‌ಗಳು ಅಥವಾ ಶೇಕಡಾ 0.25 ರಷ್ಟು ಕುಸಿದು 17,468.30 ಕ್ಕೆ ತಲುಪಿದೆ. ಇತ್ತೀಚಿನ ವರದಿಯಂತೆ ಮುಂಬೈ ಷೇರು ಮಾರುಕಟ್ಟೆ ಬಿಎಸ್ ಇ 153 ಪಾಯಿಂಟ್ ಇಳಿಕೆಯಾಗಿ 58 ಸಾವಿರದ 950ರಲ್ಲಿ, ನಿಫ್ಟಿ 43 ಅಂಕ ಇಳಿಕೆಯಾಗಿ 17 ಸಾವಿರದ 469ರಲ್ಲಿ ವಹಿವಾಟು ನಡೆಸಿತು.