ಕಾಸರಗೋಡು: ಕುಂಡಂಗುಳಿಯಲ್ಲಿ ಯುವಕನೊಬ್ಬ ತನ್ನ ಸಾವಿಗೆ ಯುವಕ ಹಾಗೂ ಯುವತಿ ಕಾರಣವೆಂದು ಎಫ್‍ಬಿ ಪೋಸ್ಟ್ ಹಾಕಿದ ನಂತರ ನೇಣಿಗೆ ಶರಣಾದ ಘಟನೆ ನಡೆದಿದೆ. ಮೂನಾಡ್ ಜಯಪುರ ನಿವಾಸಿ ಬೆಳ್ಳುಂಗನ್-ನಾರಾಯಣಿ ದಂಪತಿ ಪುತ್ರ, ನಿರ್ಮಾಣ ಕಾಮಗಾರಿ ನೌಕರ ಅನೀಶ್(34)ನೇಣಿಗೆ ಆತ್ಮಹತ್ಯೆಗೈದ ಯುವಕ. ಒಬ್ಬಾಕೆ ಯುವತಿ ಹಾಗೂ ಯುವಕನ ಛಾಯಾಚಿತ್ರ ಫೇಸ್‍ಬುಕ್‍ನಲ್ಲಿ ಪೊಸ್ಟ್ ಮಾಡಿದ ಅನೀಶ್, ನಂತರ ನಾಪತ್ತೆಯಾಗಿದ್ದನು. ಮನೆಯವರು ಹಾಗೂ ಸ್ನೇಹಿತರು ಹುಡುಕಾಡುವ ಮಧ್ಯೆ ಕುಂಡಂಗುಳಿಯಲ್ಲಿರುವ ನಿರ್ಮಾಣಹಂತದ ಮನೆಯ ಸಿಟೌಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನೀಶ್ ಮೃತದೇಹ ಪತ್ತೆಯಾಗಿದೆ. ಬೇಡಡ್ಕ ಠಾಣೆ ಪೊಲೀಸರು ಕೇಸು ದಆಖಲಿಸಿಕೊಂಡಿದ್ದಾರೆ.
ಎಫ್.ಬಿ.ಯಲ್ಲಿ ಪೋಸ್ಟ್ ಹಾಕಿ ನೇಣಿಗೆ ಶರಣಾದ ಯುವಕ
0
ಅಕ್ಟೋಬರ್ 20, 2022
Tags