ಚಂಡೀಗಢ: ಭಾರತೀಯ ವಾಯುಪಡೆ ಸೈನಿಕರಿಗೆ ಸಿದ್ಧಪಡಿಸಿರುವ ಹೊಸ ಯುದ್ಧ ಸಮವಸ್ತ್ರವನ್ನು ವಾಯುಪಡೆಯ 90ನೇ ವಾರ್ಷಿಕೋತ್ಸವದಲ್ಲಿ ಅನಾವರಣಗೊಳಿಸಲಾಯಿತು. ಡಿಜಿಟಲ್ ಪ್ರಿಂಟ್ ಇರುವ ಹೊಸ ಸಮವಸ್ತ್ರವನ್ನು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಚಂಡೀಗಢದಲ್ಲಿ ಲೋಕಾರ್ಪಣೆಗೊಳಿಸಿದರು.
ವರ್ಷದ ಆರಂಭದಲ್ಲಿ ಭಾರತೀಯ ಸೇನೆ ತನ್ನ ನೂತನ ಸಮವಸ್ತ್ರವನ್ನು ಸೈನಿಕರಿಗೆ ನೀಡಿತ್ತು. ಇದೀಗ ವಾಯುಸೇನೆ ಹೊಸ ಸಮವಸ್ತ್ರವನ್ನು ಸೈನಿಕರಿಗೆ ನೀಡಿದೆ. ಹೊಸ ಸಮವಸ್ತ್ರವು ಹಿಂದಿನ ಸಮವಸ್ತ್ರಕ್ಕಿಂತ ವಿಭಿನ್ನವಾಗಿದ್ದು, ಹೊಸ ಮಾದರಿಯ ವಿನ್ಯಾಸ ಬಳಸಲಾಗಿದೆ. ಹೊಸ ಸಮವಸ್ತ್ರವು ಭೂಪ್ರದೇಶದ ಬಣ್ಣವನ್ನು ಹೊಂದಿದ್ದು, ಸಿಬ್ಬಂದಿಗೆ ಹೆಚ್ಚಿನ ಸಹಾಯಕವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಭಾರತೀಯ ವಾಯುಸೇನೆ ಈಗಾಗಲೇ ಯುದ್ಧ ಸಮವಸ್ತ್ರವನ್ನು ಹೊಂದಿದೆ. ಇದೀಗ ಹೊಸ ಮಾದರಿಯ ಸಮವಸ್ತ್ರ ಲಭ್ಯವಾಗಿದೆ ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
The Indian Air Force today unveiled the new combat uniform of the force, on its 90th anniversary.
#IndianAirForceDay