ಕೊಟ್ಟಾಯಂ: ಪೋಲೀಸರಿಗೆ ಹೆದರಿ ಓಡಿ ಹೋದ ಮೂರು ವರ್ಷದ ಬಾಲಕಗೆ ಪೋಲೀಸ್ ತಂಡವೊಂದು ಪ್ರೀತಿಯ ಉಡುಗೊರೆ ನೀಡಿದೆ. ಠಾಣೆಗೆ ಕರೆದೊಯ್ದು ಸಿಹಿ ತಿನಿಸು ನೀಡಿ ಪ್ರೀತಿಯಿಂದ ಜತೆಗಿರಿಸಿ ಮಗುವಿನ ಭಯವನ್ನು ಹೋಗಲಾಡಿಸಿದೆ.
ವಿಜಿಕ್ಕಿತೋಡ್ ಚೆರುವಳ್ಳಿಯಲ್ಲಿರುವ ಅನಿಲ್ ಕುಮಾರ್ ಮತ್ತು ನಯನಾ ದಂಪತಿಯ ಕಿರಿಯ ಪುತ್ರ ದೇವಜಿತ್ ಕಾಂಜಿರಪಳ್ಳಿ ಪೋಲೀಸ್ ಠಾಣೆಯಲ್ಲಿ ಬೇಬಿ ಅತಿಥಿಯಾಗಿದ್ದ. ಪಕ್ಕದ ಮನೆಯಲ್ಲಿ ಎಸ್‍ಐ ಅರುಣ್ ಥಾಮಸ್ ಮತ್ತು ಅವರ ತಂಡ ಪ್ರಕರಣದ ತನಿಖೆಗೆ ಬಂದಿದ್ದನ್ನು ಕಂಡು ಮಗು ಭಯಗೊಂಡಿತ್ತು. ರಾತ್ರಿಯಾದರೂ ಅಳು ನಿಲ್ಲದ ಕಾರಣ ಮನೆಯವರು ಎಸ್‍ಐಗೆ ಮಾಹಿತಿ ನೀಡಿದರು.
ನಂತರ ಎಸ್‍ಐ ಸೂಚನೆಯಂತೆ ಮಗುವನ್ನು ಠಾಣೆಗೆ ಕರೆತರಲಾಯಿತು. ಪೋಲೀಸರು ಸುಮಾರು ಒಂದು ಗಂಟೆ ದೇವ್ ಜಿತ್‍ನನ್ನು ತಮ್ಮ ಮಡಿಲಲ್ಲಿ ಕುಳ್ಳಿರಿಸಿ ಕಥೆಗಳನ್ನು ಹೇಳುತ್ತಾ ಆತನಿಗೆ ಸಿಹಿತಿಂಡಿಗಳನ್ನು ನೀಡಿದರು. ಇದರೊಂದಿಗೆ ಪೋಲೀಸರ ಬಗೆಗಿನ ಅವ್ಯಕ್ತ ಭಯ ಬದಲಾಗಿದ್ದು, ದೇವಜಿತ್ ಚುರುಕಾದ. ಎಸ್‍ಐ ದೇವ್ ಜಿತ್‍ನನ್ನು ಹಿಡಿದುಕೊಂಡು ಸಾಂತ್ವನ ಹೇಳುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೋಲೀಸರನ್ನು ನೋಡಿ ರಾತ್ರಿಯಿಡೀ ಕಿರುಚಿದ ಬಾಲಕ: ಬಾಲಕನನ್ನು ಠಾಣೆಗೆ ಕರೆಸಿ ಸಿಹಿತಿಂಡಿ ನೀಡಿ ಚುರುಕುಗೊಳಿಸಿದ ಠಾಣಾಧಿಕಾರಿ
0
ಅಕ್ಟೋಬರ್ 19, 2022