ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯ ಮಾಜಿ ಕಾರ್ಯದರ್ಶಿ ಬಿಜು ರಾಘವನ್ ಅವರಿಗೆ ವಿಶೇಷ ಪುರಸ್ಕಾರ ನೀಡಲಾಯಿತು. ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲೆಯ ಪ್ರವಾಸೋದ್ಯಮ ಮತ್ತು ಡಿಟಿಪಿಸಿಯ ಲಿಟಲ್ ಇಂಡಿಯಾ ಪ್ರವಾಸೋದ್ಯಮ ಅಭಿಯಾನಕ್ಕೆ ನೀಡಿದ ಬೆಂಬಲಕ್ಕಾಗಿ ವೈಸ್‍ರಾಯ್ ಹಾಸ್ಪಿಟಾಲಿಟಿ ಗ್ರೂಪ್‍ಗೆ, ಜಿಲ್ಲೆಕಡಲತೀರಗಳ ಕುರಿತಾದ ವಿಸ್ಮಯ ತೀರ ಸಾಕ್ಷ್ಯಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಮೂಸಾ ಪಾಲಕುನ್ನು ಅವರಿಗೂ ಪುರಸ್ಕಾರ ನೀಡಲಾಯಿತು.
ಜಿಲ್ಲೆ ರೂಪುಗೊಂಡ 37ನೇ ವರ್ಷಾಚರಣೆ ಅಂಗವಾಗಿ ಬಿಟಿಎಫ್ ನಡೆಸಿದ ಪ್ರವಾಸೋದ್ಯಮ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಬಿಆರ್‍ಡಿಸಿ ವ್ಯವಸ್ಥಾಪಕ ಯು. ಎಸ್. ಪ್ರಸಾದ್, ಪ್ರಮಾಣೀಕೃತ ಪ್ರವಾಸಿ ಮಾರ್ಗದರ್ಶಿ ನಿರ್ಮೇಶ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಮಾಜಿ ಉಪನಿರ್ದೇಶಕ ಪಿ. ಮುರಳೀಧರನ್, ಡಿಟಿಪಿಸಿ ರಾಣಿಪುರಂ ರೆಸಾರ್ಟ್ ನಿರ್ವಾಹಕ ಸಿ. ಗಣೇಶ್ ಅವರಿಗೆ ಶಾಸಕ ಸಿ.ಎಚ್ ಕುಞಂಬು ಸ್ಮರಣಿಕೆ ನೀಡಿದರು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್ ಚಂದ್, ಬೇಕಲ ಪ್ರವಾಸೋದ್ಯಮ ಫ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್, ಅನಸ್ ಮುಸ್ತಫಾ, ಅಬ್ದುಲ್ ಖಾದರ್ ಪಳ್ಳಿಪುಳ ಉಪಸ್ಥಿತರಿದ್ದರು.
ಬೇಕಲ ಪ್ರವಾಸೋದ್ಯಮ ಫ್ರಾಟರ್ನಿಟಿ: ವಿವಿಧ ಪ್ರಶಸ್ತಿಗಳ ವಿತರಣೆ
0
ಅಕ್ಟೋಬರ್ 09, 2022