ಕೊಟ್ಟಾಯಂ: ಜಿಲ್ಲೆಯ ವಿವಿಧೆಡೆ ಪಾಪ್ಯುಲರ್ ಫ್ರಂಟ್ ಕಚೇರಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ. ಈರಾÀಟುಪೇಟೆ ಮತ್ತು ಕುಮ್ಮನಂನಲ್ಲಿರುವ ಪಿಎಫ್‍ಐ ಕಚೇರಿಗಳನ್ನು ಪೆÇಲೀಸರ ನೇತೃತ್ವದಲ್ಲಿ ಮುಚ್ಚಲಾಯಿತು.
ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಚೇರಿ ಈರಾಟುಪೇಟೆಯಲ್ಲಿ ಕಲ್ಚರಲ್ ಸೆಂಟ್ರಲ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಪಾಲಿಕೆಯ ಪಂಡಿತ್ನಾಳ್ ವಿಭಾಗದ ಕಸಾಯಿಖಾನೆ ಬಳಿಯ ಪೀಸ್ ವ್ಯಾಲಿ ಕಲ್ಚರಲ್ ಸೆಂಟರ್ ಎಂಬ ಕಚೇರಿಯನ್ನು ಮುಚ್ಚಲಾಗಿದೆ. ಪಾಲ ಡಿವೈಎಸ್ಪಿ ಗಿರೀಶ್ ಪಿ ಸಾರಥಿ ನೇತೃತ್ವದ ತಂಡ ನೋಟಿಸ್ ಅಂಟಿಸಿ ಬೀಗ ಹಾಕಿದೆ. ಈರಾÀಟುಪೇಟೆಯಲ್ಲಿ ಸಾಂಸ್ಕೃತಿಕ ಸಂಗಮ ಎಂಬ ಹೆಸರಿನಲ್ಲಿ ಪಿಎಫ್ ಐ ಸಂಘಟನೆ ಕಾರ್ಯಾಚರಿಸುತ್ತಿತ್ತು ಎಂದು ಪೆÇಲೀಸರು ತಿಳಿಸಿದ್ದಾರೆ. ಸದ್ಯ ಇಲ್ಲಿ ಪೆÇಲೀಸ್ ಭದ್ರತೆ ಏರ್ಪಡಿಸಲಾಗಿದೆ. ಕಂದಾಯ ಇಲಾಖೆಯಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ.
ಕುಮ್ಮನಂ ಕಲಾಪುರಕಾಡ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಫ್‍ಐ ಕಚೇರಿಗೂ ಪೆÇಲೀಸರು ಸೀಲ್ ಹಾಕಿದ್ದಾರೆ. ಕಾರ್ಯಕರ್ತರು ಇಲ್ಲಿ ಕ್ರೀಡಾ ತರಬೇತಿ, ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೆÇಲೀಸರಿಗೆ ಮೊದಲೇ ಸಿಕ್ಕಿತ್ತು. ಪೆÇಲೀಸರ ಮಾಹಿತಿ ಮೇರೆಗೆ ಮುಚ್ಚಲು ಜಿಲ್ಲಾಧಿಕಾರಿ ಸೂಚಿಸಿದರು. ರಾಜ್ಯದ ವಿವಿಧೆಡೆ ಪಿಎಫ್‍ಐ ಕಚೇರಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಎನ್‍ಐಎ ಸಮ್ಮುಖದಲ್ಲಿ ತಹಸೀಲ್ದಾರ್ ಮತ್ತು ಪೆÇಲೀಸರ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ಈರಾಟುಪೇಟೆಯಲ್ಲಿ ಕಲ್ಚರಲ್ ಸೆಂಟರ್ ಹೆಸರಿನಲ್ಲಿ ನಡೆಸುತ್ತಿದ್ದ ಪಿಎಫ್ ಐ ಕಚೇರಿಗೆ ಬೀಗ: ಕುಮ್ಮನಂ ಕಚೇರಿಗೂ ಪೋಲೀಸರಿಂದ ಮೊಹರು
0
ಅಕ್ಟೋಬರ್ 01, 2022