ಎರ್ನಾಕುಳಂ: ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅವರಿಗೆ ಸಿಬಿಐ ನೋಟಿಸ್ ಕಳಿಸಿದೆ. ಲೈಫ್ ಮಿಷನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಕಳುಹಿಸಲಾಗಿದೆ.
ಇಂದು ಬೆಳಗ್ಗೆ 10.30ಕ್ಕೆ ಸಿಬಿಐ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚನೆ ನೀಡಲಾಗಿದೆ.
ಲೈಫ್ ಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಅವರನ್ನು ಸಿಬಿಐ ವಿಚಾರಣೆಗೆ ಕರೆದಿರುವುದು ಇದೇ ಮೊದಲು. ಫ್ಲ್ಯಾಟ್ ನಿರ್ಮಾಣದ ಗುತ್ತಿಗೆ ನೀಡುವಲ್ಲಿ ಭ್ರμÁ್ಟಚಾರ ಮತ್ತು ಕಮಿಷನ್ ನಡೆದಿದೆ ಎಂದು ಆರೋಪಿಸಲಾಗಿದೆ. ಕಮಿಷನ್ ಮೊತ್ತವನ್ನು ಯುಎಇ ಕಾನ್ಸುಲೇಟ್ ಅಧಿಕಾರಿಗಳು ಮತ್ತು ಎಂ ಶಿವಶಂಕರ್ ವಿತರಿಸಿದ್ದಾರೆ ಎಂದು ಸ್ವಪ್ನಾ ಸುರೇಶ್ ಆರೋಪಿಸಿದ್ದರು. ಇದರ ಆಧಾರದ ಮೇಲೆ ಶಿವಶಂಕರ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ.
ಇದಲ್ಲದೇ ಲೈಫ್ ಮಿಷನ್ ಪ್ರಕರಣದ ಭ್ರμÁ್ಟಚಾರ ಶಿವಶಂಕರ್ ಅವರ ಸಂಪೂರ್ಣ ಅರಿವಿನಿಂದ ನಡೆದಿದೆ ಎಂದೂ ಸ್ವಪ್ನಾ ಸಿಬಿಐಗೆ ಹೇಳಿಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರದ ಎಲ್ಲ ದಾಖಲೆಗಳನ್ನು ಸಿಬಿಐ ಸಂಗ್ರಹಿಸಿದೆ. ಅದರಂತೆ ಮುಂದಿನ ತನಿಖೆ ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಲೈಫ್ ಮಿಷನ್ ಹಗರಣ ಪ್ರಕರಣದಲ್ಲೂ ಆರೋಪಿಗಳಾಗಿದ್ದಾರೆ.
ಲೈಫ್ ಮಿಷನ್ ಹಗರಣ; ಶಿವಶಂಕರ್ ಗೆ ನೋಟಿಸ್ ಕಳುಹಿಸಿದ ಸಿಬಿಐ; ಇಂದು ಹಾಜರಾಗಲು ಸೂಚನೆ
0
ಅಕ್ಟೋಬರ್ 05, 2022
Tags