ಉಪ್ಪಳ: ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ಅಸೋಸಿಯೇಷನ್ ಹಮ್ಮಿಕೊಂಡ ವಾರ್ತ ವಾಚನ ಸ್ಪರ್ಧೆಯು ಇತ್ತೀಚೆಗೆ ಮಂಜೇಶ್ವರ ಬಿ ಆರ್ ಸಿ ಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ.ಅವರು ಉದ್ಘಾಟಿಸಿದರು. ಮುಳಿಂಜ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ವೈ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೈವಳಿಕೆ ಪಂಚಾಯತಿ ಮಾಜಿ ಅಧ್ಯಕ್ಷ, ಪತ್ರಕರ್ತ ಅಚ್ಯುತ ಚೇವಾರ್ ಹಾಗೂ ರಾಘವ ಅವರು ಭಾಗವಹಿಸಿದ್ದರು. ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಕಾರ್ಯದರ್ಶಿ ರಾಜೇಶ್ ಕೊಡ್ಲಮೊಗರು ಉಪಸ್ಥಿತರಿದ್ದರು. ವಿಜ್ಞಾನ ಕ್ಲಬ್ ನ ಉಪ ಕಾರ್ಯದರ್ಶಿ ಶಕೀಲ ಟೀಚರ್ ವಂದಿಸಿದರು. ಸಂಜೀವ ಅವರು ಕಾರ್ಯಕ್ರಮ ನಿರ್ವಸಿದರು.