ಕಾಸರಗೋಡು: ಕನ್ನಡ ಭಾಷೆ, ಸಂಸ್ಕøತಿಯ ಮೇಲೆ ನಡೆಯುವ ಅನ್ಯಾಯವನ್ನು ಪ್ರತಿಭಟಿಸುವುದರ ಜತೆಗೆ ಕನ್ನಡಿಗರಿಗೆ ನ್ಯಾಯ ಒದಗಿಸಲು ಕಾನೂನು ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಹೋರಾಟಗಾರ ಪುರುಷೋತ್ತಮ ಮಾಸ್ಟರ್ ಅವರು ಜನಾನುರಾಗಿಯಾಗಿದ್ದರು ಎಂದು ಹಿರಿಯ ವಕೀಲ ಐ.ವಿ ಭಟ್ ತಿಳಿಸಿದ್ದಾರೆ.
ಅವರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಇವಿಧ ಸಂಘಟನೆಗಳ ಸಹಕಾರದೊಂದಿಗೆ ಕಸಾಪ ಕಾಸರಗೋಡು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪುರುಷೋತ್ತಮ ಮಾಸ್ಟರ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಕನ್ನಡ ಭಾಷೆ, ಕನ್ನಡಿಗರಿಗೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಡುವ ಛಾತಿ ಅವರಲ್ಲಿತ್ತು. ತಮ್ಮ ಜೀವನದ ಅಂತಿಮ ಕಾಲಘಟ್ಟದವರೆಗೂ ಕನ್ನಡಕ್ಕಾಗಿ ಹೋರಾಟ ಮುಂದುವರಿಸಿದ ಧೀಮಂತ ಅವರಾಗಿದ್ದರು ಎಂದು ತಿಳಿಸಿದರು.
ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ವೈ. ಸತ್ಯನಾರಾಯಣ, ಮುರಳೀಧರ ಬಳ್ಳಕ್ಕುರಾಯ, ಡಿ. ಮಹಾಲಿಂಗೇಶ್ವರ ರಾಜ್, ಸತೀಶ್ ಕೂಡ್ಲು, ವಿಶಾಲಾಕ್ಷ ಪುತ್ರಕಳ, ಜಯಪ್ರಕಾಶ್ ತಾಯನ್ನೂರು, ಗಣೇಶ್ ಪ್ರಸಾದ್ ಪಾಣೂರು, ಡಾ. ಬಿ.ರಾಝಗೋಪಾಲ, ಡಾ. ಬಿ. ಪ್ರಕೃತಿ, ಡಾ. ಜಯಪ್ರಕಾಶ್‍ನಾರಾಯಣ, ಡಾ. ಬೇ.ಸಿ ಗೋಪಾಲಕೃಷ್ಣ, ನವೀನ ಮಾಸ್ಟರ್ ಉಪಸ್ಥಿತರಿದ್ದರು. ಶೇಖರ್ ಶೆಟ್ಟಿ ಸ್ವಾಗತಿಸಿದರು. ಈ ಸಂದರ್ಭ ಬಿ. ಪುರುಷೋತ್ತಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡ ಭಾಷೆ, ಸಂಸ್ಕøತಿಗಾಗಿ ಹೋರಾಟ ನಡೆಸಿದ ಧೀಮಂತ ಬಿ.ಪುರುಷೋತ್ತಮ ಅವರಿಗೆ ಶ್ರದ್ಧಾಂಜಲಿ
0
ಅಕ್ಟೋಬರ್ 19, 2022