ಕಾಸರಗೋಡು: ಕೊಯಂಬತ್ತೂರಿನ ದೇಗುಲವೊಂದರ ಸನಿಹ ನಡೆದ ಸ್ಪೋಟ ಪ್ರಕರಣದ ತನಿಖೆಯನ್ನು ಕೇರಳಕ್ಕೂ ವಿಸ್ತರಿಸಲಾಗಿದೆ. ಕೊಯಂಬತ್ತೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಂದಿ ಆರೋಪಿಗಳು ಕೇರಳಕ್ಕೆ ಪಲಾಯನ ನಡೆಸಿರುವುದರಿಂದ ತನಿಖೆ ಕೇರಳಕ್ಕೆ ವಿಸ್ತರಿಸಲಾಗಿದೆ.
ಸ್ಪೋಟದಲ್ಲಿ ಸಾವಿಗೀಡಾದ ಆತ್ಮಾಹುತಿ ಬಾಂಬರ್, ಕೊಯಂಬತ್ತೂರು ಉಕ್ಕಡಂ ಜೆ.ಎಂ ಕಾಳನಿ ನಿವಾಸಿ ಜಮೀಶ್ ಮುಬೀನ್ ಕೇರಳದೊಂದಿಗಿನ ನಂಟು ಸಾಬೀತಾಗತೊಡಗಿದೆ. ಶ್ರೀಲಂಕಾದಲ್ಲಿ ವರ್ಷಗಳ ಹಿಂದೆ ಈಸ್ಟರ್ ಹಬ್ಬದ ಸಂದರ್ಭ ನೂರಾರು ಮಂದಿಯನ್ನು ಬಲಿತೆಗೆದುಕೊಂಡಿದ್ದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಎನ್‍ಐಎ ಬಂಧಿಸಿ ಪ್ರಸಕ್ತ ತೃಶ್ಯೂರ್ ವೀಯೂರ್ ಕೇಂದ್ರ ಕಾರಾಗೃಹದಲ್ಲಿರುವ ಮಹಮ್ಮದ್ ಅಜರುದ್ದೀನ್ ಜತೆಗೆ ಮುಬೀನ್ ನಿಕಟ ಸಂಪರ್ಕ ಹೊಂದಿದ್ದನು. ಇತ್ತೀಚೆಗೆ ಮುಬೀನ್ ಕಾರಾಗೃಹಕ್ಕೆ ಭೇಟಿ ನೀಡಿ ಮಹಮ್ಮದ್ ಅಜರುದ್ದೀನ್ ಜತೆ ಮಾತುಕತೆ ನಡೆಸಿದ್ದನೆಂಬ ಮಾಹಿತಿಯಿದೆ. ಮಹಮ್ಮದ್ ಅಜರುದ್ದೀನ್ ಶ್ರೀಲಂಕಾದ ಬಾಂಬ್ ಸ್ಪೋಟದ ಪ್ರಮುಖ ಸೂತ್ರಧಾರ ನಹರಾನ್ ಹಾಶ್ಮಿಯ ಸಹಪಾಠಿಯಾಗಿದ್ದಾನೆ ಎಂದೂ ತನಿಖಾ ತಂಡ ಪತ್ತೆಹಚ್ಚಿತ್ತು.
ಕೊಯಂಬತ್ತುರು ಸ್ಪೋಟ: ತನಿಖೆ ಕೇರಳಕ್ಕೆ ವಿಸ್ತರಣೆ
0
ಅಕ್ಟೋಬರ್ 26, 2022