ಮುಳ್ಳೇರಿಯ: ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಅಂಗಸಂಸ್ಥೆಯಾದ ಯಕ್ಷಬಳಗ ಮುಳಿಯಾರು ಇದರ ಸದಸ್ಯರಾದ ಪ್ರತಿಭಾನ್ವಿತ ವಿದ್ಯಾಥಿಗಳನ್ನು ಅಭಿನಂದಿಸಲಾಯಿತು.
ಯಸ್ ಯಸ್ ಯಲ್ ಸಿ ವಿದ್ಯಾರ್ಥಿಗಳಾದ ವಿಷ್ಣು ಯಂ ಮೂಡುಬಿದಿರೆ ಆಳ್ವಾಸ್ ಕಾಲೇಜ್, ಮನೀಶ್ ಕೆ, ಜಿ ವಿ ಯಚ್ ಯಸ್ ಯಸ್ ಕಾರಡ್ಕ, ದೀಕ್ಷಾ ಎ , ಎನ್ ಯಚ್ ಯಸ್ ಯಸ್ ಪೆರಡಾಲ, ಕವನ ಕೆ, ಯಸ್ ಎ ಪಿ ಯಚ್ ಯಸ್ ಯಸ್ ಅಗಲ್ಪಾಡಿ, ಪಿ ಯು ಸಿ ವಿದ್ಯಾರ್ಥಿನಿ ಸ್ತುತಿ ಕೆ, ಅಂಬಿಕಾ ಕಾಲೇಜ್ ಪುತ್ತೂರು ಇವರನ್ನು ಶಾಲು ಹೊದೆಸಿ ಫಲ ಸ್ಮರಣಿಕೆಯನ್ನಿತ್ತು ಅಭಿನಂದಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್ ಕೆ ಅಧ್ಯಕ್ಷಸ್ಥಾನ ವಹಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ ಶಿವಕುಮಾರ್ ಅಡ್ಕ ಇವರು ಶುಭಹಾರೈಸಿದರು. ಸನ್ಮಾನಿತರಾದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಂಡರು. ಕೃಷ್ಣ ಭಟ್ ಅಡ್ಕ ಸ್ವಾಗತಿಸಿ ಮುರಳಿ ಸ್ಕಂದ ವಂದಿಸಿದರು. ಪ್ರತಿಷ್ಠಾನದ ಸದಸ್ಯರಾದ ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ, ವಿಜಯಲಕ್ಷ್ಮಿ ಸ್ಕಂದ, ಹರಿಕೃ಼ಷ್ಣ ಪೆರಡಂಜಿ ಉಪಸ್ಥಿತರಿದ್ದರು.