ನವದೆಹಲಿ:ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ 2012ರ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗೆ ಗೈರುಹಾಜರಾಗಿದ್ದಕ್ಕಾಗಿ ದಿಲ್ಲಿ ಪೊಲೀಸರು ಬುಧವಾರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಗತಿಯಲ್ಲಿರುವ ವಿಚಾರಣೆಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸದಿದ್ದಕ್ಕಾಗಿ ಕಿಂಗ್ಫಿಷರ್ ಏರ್ಲೈನ್ಸ್ನ ಮಾಜಿ ಮಾಲಿಕ ಮಲ್ಯ ವಿರುದ್ಧ ದೂರು ದಾಖಲಿಸುವಂತೆ ದಿಲ್ಲಿಯ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿತ್ತು.
ಕಿಂಗ್ ಫಿಷರ್ ಸೇವಾಶುಲ್ಕವಾಗಿ ನೀಡಿದ್ದ ಒಟ್ಟು 7.5 ಕೋ.ರೂ.ಗಳ ಚೆಕ್ಗಳನ್ನು ಬ್ಯಾಂಕ್ಖಾತೆಯಲ್ಲಿ ಹಣವಿಲ್ಲದೆ ಅಮಾನ್ಯಗೊಂಡ ಬಳಿಕ 2012,ಜೂನ್ನಲ್ಲಿ ದಿಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿಯಮಿತವು ಮಲ್ಯ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿತ್ತು.
ಅದೇ ವರ್ಷ ಕಿಂಗ್ ಫಿಶರ್ ನೀಡಿದ್ದ 60 ಕೋ.ರೂ.ಗಳ ಚೆಕ್ಗಳು ಅಮಾನ್ಯಗೊಂಡಿದ್ದರಿಂದ ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿಯಮಿತ ಕೂಡ ಮಲ್ಯ ವಿರುದ್ಧ ಪ್ರಕರಣ ದಾಖಲಿಸಿತ್ತು.