ಕೊಚ್ಚಿ: ಕೇರಳದಲ್ಲಿ ನಶೆ ಅಗತ್ಯವಿರುವ ಎಲ್ಲರಿಗೂ ಡ್ರಗ್ಸ್ ಸುಲಭದಲ್ಲಿ ಲಭ್ಯವಾಗುತ್ತಿದೆ ಎಂದು ನಟ ಮಮ್ಮುಟ್ಟಿ ಹೇಳಿದ್ದಾರೆ. ರಾಜ್ಯಾದ್ಯಂತ ಇμÉ್ಟಲ್ಲಾ ಮದ್ಯದಂಗಡಿಗಳು ಇರುವಾಗ ಮದ್ಯಪಾನ ನಿಷೇಧಿಸಲು ಸಾಧ್ಯವೇ ಎಂದು ಮಮ್ಮುಟ್ಟಿ ಪ್ರಶ್ನಿಸಿದರು.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಮ್ಮುಟ್ಟಿ ಅವರು ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಚಟ ಎಂಬುದು ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರೂ ಅದನ್ನು ಬಳಸುತ್ತಾರೆ. ಮಾದಕ ದ್ರವ್ಯ ಸೇವನೆ ಒಳ್ಳೆಯದಲ್ಲ ಅಥವಾ ಪೆÇ್ರೀತ್ಸಾಹಿಸಬೇಕಾದ ವಿಷಯವಲ್ಲ. ಅದು ಚಲನಚಿತ್ರದಲ್ಲಿರಲಿ ಅಥವಾ ಹೊರಗಿರಲಿ. ಇದು ಜೀವಕ್ಕೆ ಅಪಾಯವಾಗಿದೆ. ಇವೆಲ್ಲವೂ ಇಲ್ಲಿ ಲಭ್ಯ. ಇಲ್ಲಿ ಅಮಲು ಪದಾರ್ಥಗಳಿಗೆ ಅವಕಾಶವಿಲ್ಲ ಎಂಬ ಫಲಕ ಹಾಕಿ ನಾವೇನು ಮಾಡಲು ಸಾಧ್ಯ? ಇμÉ್ಟಲ್ಲಾ ಮದ್ಯದ ಅಂಗಡಿಗಳನ್ನು ಹಾಕಿ ಮದ್ಯ ನಿμÉೀಧ ಮಾಡಲು ಸಾಧ್ಯವೇ? ಇದು ಜನರು ಬಹಳ ಗಂಭೀರವಾಗಿ ಯೋಚಿಸಬೇಕಾದ ವಿಷಯ. ಇದು ನಿರ್ಮಾಪಕರು ಅಥವಾ ನಟರು ಹೇಳುವ ವಿಷಯವಲ್ಲ, ಪ್ರತಿಯೊಬ್ಬರೂ ಯೋಚಿಸಬೇಕು. ಇದು ನಮ್ಮ ಸಮಾಜದಲ್ಲಿ ಬೇಕೇ, ಸಮಾಜಕ್ಕೆ ಹಾನಿಕರವೇ, ಪ್ರಚಾರ ಮಾಡಬೇಕೇ ಎಂದು ಸಮಾಜವೇ ಯೋಚಿಸಬೇಕು. ಅದನ್ನೊಂದುಕಡೆ ಉತ್ತೇಜಿಸಿ ಮತ್ತೊಂದೆಡೆ ನಿಷೇಧದ ಬಗ್ಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಮಮ್ಮುಟ್ಟಿ ಹೇಳಿದ್ದಾರೆ.
ಇದೇ ವೇಳೆ ಕೊಚ್ಚಿ ಮಲಯಾಳಂ ಚಿತ್ರರಂಗದ ಕೇಂದ್ರಬಿಂದುವಾಗಿದ್ದು, ಅಲ್ಲಿ ಅಕ್ರಮ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ಜೋರಾಗಿದೆ ಎಂಬ ಬಲವಾದ ಆರೋಪವೂ ಇದೆ. ಮಾರಕ ವಸ್ತು ಹೊಂದಿದ್ದಕ್ಕಾಗಿ ಮಲಯಾಳಂ ಚಿತ್ರರಂಗದ ಪ್ರಮುಖ ಯುವ ನಟನನ್ನು ಬಂಧಿಸಿದ ನಂತರ, ಈ ವಿಷಯದಲ್ಲಿ ಪೆÇಲೀಸರಿಂದ ಯಾವುದೇ ಮಧ್ಯಸ್ಥಿಕೆ ಕಂಡುಬಂದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಚಿತ್ರೋದ್ಯಮದಲ್ಲಿ ಅಕ್ರಮ ಹಣ ವರ್ಗಾವಣೆ, ಡ್ರಗ್ಸ್ ದಂಧೆ ವ್ಯಾಪಕವಾಗಿದ್ದು, ಈ ವಹಿವಾಟಿನಲ್ಲಿ ಕೆಲವು ಉಗ್ರಗಾಮಿ ಚಿತ್ರ ನಿರ್ಮಾಪಕರು ಸಕ್ರಿಯರಾಗಿದ್ದಾರೆ ಎಂಬ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
'ನಶೆ ಸಿನಿಮಾದವರಿಗೆ ಮಾತ್ರವಲ್ಲ, ಎಲ್ಲರಲ್ಲೂ ಇದೆ'; ಡ್ರಗ್ಸ್ ಬಳಕೆ ಬಗ್ಗೆ ಮಮ್ಮುಟ್ಟಿ
0
ಅಕ್ಟೋಬರ್ 05, 2022