ಬದಿಯಡ್ಕ: ಮಕ್ಕಳು ಶೈಕ್ಷಣಿಕ ಕಲಿಕೆಯ ಹಂತದಲ್ಲಿಯೇ ವಿವಿಧ ಪ್ರತಿಭೆ ಅನಾವರಣ ಮಾಡುವ ವೇದಿಕೆಯ ಪೂರ್ಣ ಪ್ರಯೋಜನ ಪಡೆಯಬೇಕು ಎಂದು ಸಂಗೀತ ಕಲಾವಿದ, ಗುರು ವಿದ್ವಾನ್. ಯೋಗೀಶ ಶರ್ಮ ಬಳ್ಳಪದವು ನುಡಿದರು.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯ ಶಾಲಾ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಮ್ಮ ಬಾಲ್ಯದ ಮಾರ್ಗದರ್ಶಕರನ್ನು ನೆನಪಿಸಿದ ಅವರು ಹಿಂದಿಗಿಂತಲೂ ಅವಕಾಶಗಳಿಂದು ವಿಶಾಲವಾಗಿದೆ. ಸದುಪಯೋಗ ಪಡೆದುಕೊಳ್ಳುವ ನೈಪುಣ್ಯತೆ ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳೆದುಬರಲಿ ಎಂದು ಸಲಹೆಯಿತ್ತರು. ತಮ್ಮ ಅಪೂರ್ವ ಸಂಗೀತ ಗಾನಸುಧೆಯಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು. ಶಾಲೆಯ ವತಿಯಿಂದ ಅವರನ್ನು ಸ್ಮರಣಿಕೆಯಿತ್ತು ಗೌರವಿಸಲಾಯಿತು.
ಕಾಸರಗೋಡು ಜಿಲ್ಲಾ ಪಂಚಾಯಿತಿಯ ಸದಸ್ಯೆ ಶೈಲಜಾ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಂದ ಸಾಂಸ್ಕøತಿಕ ಅಭಿರುಚಿ ಬೆಳೆಸಲು ಕಲೋತ್ಸವ ವೇದಿಕೆಯಾಗಲಿ ಎಂದು ಹಾರೈಸಿದರು. ಗ್ರಾಮ ಪಂಚಾಯಿತಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾತನಾಡಿ ಮಕ್ಕಳಿಗೆ ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಅಧ್ಯಕ್ಷತೆವಹಿಸಿದರು. ಉಪಾಧ್ಯಕ್ಷ ರಾಮ, ಸದಸ್ಯರಾದ ಶರೀಫ್, ನೌಫಲ್, ಸುಂದರ ಬಾರಡ್ಕ, ಇತರ ಸದಸ್ಯರು,ಮಾತೃ ರಕ್ಷಕ ಮಂಡಳಿಯ ಆಸ್ಯಮ್ಮ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ರಾಜಗೋಪಾಲ ಅವರು ಸ್ವಾಗತಿಸಿ ಶಿಕ್ಷಕಿ ಪ್ರಸೀತಾ ಕುಮಾರಿ ವಂದಿಸಿದರು.ಶಿಕ್ಷಕ ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು.ಎರಡು ದಿನಗಳಲ್ಲಿ ಮೂರು ವೇದಿಕೆಗಳಲ್ಲಿ ಕಾರ್ಯಕ್ರಮ ಜರುಗಲಿದೆ.