ಕಾಸರಗೋಡು: ನಗರದಲ್ಲಿ 2009ರಲ್ಲಿ ನಡೆದ ಗೋಲಿಬಾರ್, ಪೊಲೀಸರ ಮೇಲೆ ದಾಳಿ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ.
2009 ನ. 15ರಂದು ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ ಮುಸ್ಲಿಂಲೀಗ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮುಸ್ಲಿಂಲೀಗ್ ಕಾರ್ಯಕರ್ತರ ತಂಡವೊಂದು ಉದ್ರೇಕಕಾರಿ ಘೋಷಣೆ ಮೊಳಗಿಸಿ ಏಕಾಏಕಿ ಗಲಭೆ ಆರಂಭಗೊಂಡಿತ್ತು. ಈ ಸಂದರ್ಭ ಹಲವಾರು ವಾಹನಗಳು, ವಯಾಪಾರಿ ಸಂಸ್ಥೆಗಳು, ಪೊಲೀಸ್ ವಾಹನಗಳಿಗೆ ಹಾನಿಯಾಗಿರುವುದಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು. ಗಲಭೆ ಹತ್ತಿಕ್ಕುವ ಯತ್ನದಲ್ಲಿ ಆರಂಭದಲ್ಲಿ ಲಾಟಿಪ್ರಹಾರ, ಅಶ್ರುವಾಯು ಹಾಗೂ ನಂತರ ಗೋಲಿಬಾರ್ ನಡೆಸಲಾಗಿತ್ತು.
ಗೋಲಿಬಾರಿನಿಂದ ಚೆರ್ವತ್ತೂರು ತೈಕ್ಕಾಡ್ ನಿವಾಸಿ, ಮುಸ್ಲಿಂಲೀಗ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದು, ಕುಂಬಳೆ ಆರಿಕ್ಕಾಡಿ ನಿವಾಸಿಯೊಬ್ಬ ಇರಿತದಿಂದ ಸಾವಿಗೀಡಗಿದ್ದನು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಪೊಲೀಸರ ಮೇಲೆ ಹಲ್ಲೆಗೈದು ವಾಹನಗಳಿಗೆ ಹಾನಿಯೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‍ದಾಸ್ ಪೋತ್ತನ್ ಅವರು ನೀಡಿದ ದೂರಿನನ್ವಯ 500ಕ್ಕೂ ಹೆಚ್ಚು ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿತ್ತು. ಪ್ರಸಕ್ತ 25ರಷ್ಟು ಮಂದಿಯ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಇವರನ್ನು ಖುಲಾಸೆಗೊಳಿಸಲಾಗಿದೆ.
ಪೊಲೀಸರಿಗೆ ಹಲ್ಲೆ, ವಾಹನಗಳಿಗೆ ಹಾನಿ: ಆರೋಪಿಗಳ ಖುಲಾಸೆ
0
ಅಕ್ಟೋಬರ್ 06, 2022
Tags