ತಿರುವನಂತಪುರ: ನಿμÉೀಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ನ ಅಧ್ಯಕ್ಷನಾಗಿದ್ದ ಒಎಂಎ ಸಲಾಂ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ಸಲಾಂ ಬಳಿ ಎರಡು ಪಾಸ್‍ಪೆÇೀರ್ಟ್ ಇರುವುದು ಪತ್ತೆಯಾಗಿದೆ. ಈ ಪೈಕಿ ಒಂದನ್ನು ವಿಜಿಲೆನ್ಸ್ ಮುಂದೆ ಹಾಜರುಪಡಿಸಿಲ್ಲ ಎಂದು ವರದಿಯಾಗಿದೆ.
ಅಲ್ಲದೇ ಸರ್ಕಾರದ ಅನುಮತಿ ಪಡೆಯದೇ ಹಲವು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದನ್ನು ತನಿಖಾ ತಂಡ ಪತ್ತೆ ಮಾಡಿದೆ. ಸರ್ಕಾರಿ ಅಧಿಕಾರಿಯೊಬ್ಬರು ವಿದೇಶ ಪ್ರವಾಸ ಮಾಡಬೇಕಾದರೆ ಸರ್ಕಾರದಿಂದ ಅನುಮತಿ ಪಡೆಯಬೇಕು ಎಂಬುದು ನಿಯಮ. ಆದರೆ ಸರ್ಕಾರದಿಂದ ಅನುಮತಿ ಪಡೆಯದೆ ವಿದೇಶಗಳಿಗೆ ಭೇಟಿ ನೀಡುವುದು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಇದಲ್ಲದೇ ಬ್ಯಾಂಕ್ ಖಾತೆಗಳಲ್ಲಿನ ವಹಿವಾಟುಗಳನ್ನು ಪರಿಶೀಲಿಸಲು ತನಿಖಾಧಿಕಾರಿಗಳಿಗೆ ಸಲಾಂ ಸಹಕಾರ ನೀಡಿಲ್ಲ ಎಂದು ವರದಿಯಾಗಿದೆ.
ಸರ್ಕಾರಿ ನೌಕರಿಯಲ್ಲಿದ್ದಾಗ ಧಾರ್ಮಿಕ ಭಯೋತ್ಪಾದಕ ಸಂಘಟನೆಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಕೆಎಸ್‍ಇಬಿಯಿಂದ ಸಲಾಂ ಅವರನ್ನು ವಜಾಗೊಳಿಸಲಾಗಿತ್ತು. ಈ ಕ್ರಮವು ಪಾಪ್ಯುಲರ್ ಫ್ರಂಟ್ ಅನ್ನು ನಿμÉೀಧಿಸಿದ ಹಿನ್ನೆಲೆಯಲ್ಲಿ ಮತ್ತು ಅದರ ನಂತರದ ತನಿಖೆಯ ಹಿನ್ನೆಲೆಯಲ್ಲಿ ನಡೆಸಲಾಗಿದೆ. ಈ ಹಿಂದೆ ಹಲವು ತಿಂಗಳಿಂದ ಸಲಾಂ ಅಮಾನತುಗೊಂಡಿದ್ದ.
ಇದೇ ವೇಳೆ ಅಮಾನತುಗೊಂಡಿದ್ದ ಸಲಾಂ ಗೆ ಕೆಎಸ್‍ಇಬಿ ವೇತನ ನೀಡಿರುವುದು ಕೂಡ ಪತ್ತೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ನಿಯಮ ಉಲ್ಲಂಘಿಸಿ 7.84 ಲಕ್ಷ ರೂ.ಗಳನ್ನು ಸಲಾಂ ಪಾವತಿಸಿರುವುದು ಕಂಡುಬಂದಿದೆ.
ಒಎಂಎ ಸಲಾಂಗೆ ಎರಡು ಪಾಸ್ ಪೋರ್ಟ್‍ಗಳು: ಅನುಮತಿಯಿಲ್ಲದೆ ವಿದೇಶ ಪ್ರಯಾಣ; ನಿರ್ಣಾಯಕ ಮಾಹಿತಿ ಬಯಲು
0
ಅಕ್ಟೋಬರ್ 05, 2022
Tags