ಮಂಜೇಶ್ವರ: ಕೋಳ್ಯೂರು ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾ ಪ್ರತಿμÁ್ಠನದ ವತಿಯಿಂದ ಜರಗಿದ ಯಕ್ಷಗಾನ ನವಾಹ -2022 ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದ ಸಲುವಾಗಿ ಇತ್ತೀಚೆಗೆ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ ಭಕ್ತ ಮಯೂರಧ್ವಜ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಶುಭಶರಣ ಬಾಯಾರು, ಸ್ಕಂದ ಮಯ್ಯ ವರ್ಕಾಡಿ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಯೋಗೀಶ ರಾವ್ ಚಿಗುರುಪಾದೆ(ಮಯೂರಧ್ವಜ), ಗುರುರಾಜ ಹೊಳ್ಳ ಬಾಯಾರು(ತಾಮ್ರಧ್ವಜ), ರಾಜಾರಾಮ ರಾವ್ ಮೀಯಪದವು(ಶ್ರೀಕೃಷ್ಣ), ಗಣೇಶ ನಾವಡ ಮೀಯಪದವು(ಕುಮುಧ್ವತಿ), ಅವಿನಾಶ ಹೊಳ್ಳ ವರ್ಕಾಡಿ(ಅರ್ಜುನ), ಡಾ.ಅಭಿಲಾಷ ಮಯ್ಯ ಕಡಗೆದ್ದೆ(ನಕುಲಧ್ವಜ) ಭಾಗವಹಿಸಿದ್ದರು.
ಕೋಳ್ಯೂರಲ್ಲಿ ಗುರುನರಸಿಂಹ ತಂಡದ ಭಕ್ತ ಮಯೂರಧ್ವಜ ತಾಳಮದ್ದಳೆ
0
ಅಕ್ಟೋಬರ್ 08, 2022
Tags