ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯ ಸೌಪರ್ಣಿಕ ನವಜೀವನ ಸಮಿತಿ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು ಕಚೇರಿಯಲ್ಲಿ ಆಚರಿಸಲಾಯಿತು. ಬದಿಯಡ್ಕ ಠಾಣೆಯ ಎಸ್ ಐ ವಿನೋದ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಪುμÁ್ಪರ್ಚನೆಗೈದರು. ಜಿಲ್ಲಾ ಯೋಜನಾಧಿಕಾರಿ ಮುಕೇಶ್ ಮತ್ತು ಜನಜಾಗೃತಿ ವೇದಿಕೆ ಸದಸ್ಯ ಅಖಿಲೇಶ್ ನಗುಮುಗಂ ಮುಂತಾದವರು ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದರು.ಈ ಸಂದರ್ಭ ಠಾಣಾಧಿಕಾರಿ ವಿನೋದ್ ಅವರನ್ನು ಗೌರವಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಮೇಲ್ವಿಚಾರಕ ದಿನೇಶ್ ಕೊಕ್ಕಡ ಸ್ವಾಗತಿಸಿ, ಸೌಪರ್ಣಿಕ ನವಜೀವನ ಸಮಿತಿ ಸದಸ್ಯ ಜಯರಾಮ ಪಾಟಾಳಿ ಪಡುಮಲೆ ವಂದಿಸಿದರು.
ನವಜೀವನ ಸಮಿತಿಯಿಂದ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ
0
ಅಕ್ಟೋಬರ್ 08, 2022