HEALTH TIPS

ಸ್ವಂತದ ಬಾಹ್ಯಾಕಾಶ ನಿಲ್ದಾಣ: ಉದ್ಯಮಗಳ ಸಹಕಾರ ಕೋರಿದ ಇಸ್ರೊ

 

              ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯವಿರುವ ಮರು ಬಳಕೆಯ ರಾಕೆಟ್‌ ನಿರ್ಮಾಣಕ್ಕಾಗಿ ಉದ್ಯಮಗಳ ಸಹಕಾರ ಕೋರಿದೆ.

                 'ರಾಕೆಟ್‌ನ ವಿನ್ಯಾಸ ಕಾರ್ಯದಲ್ಲಿ ಇಸ್ರೊ ತೊಡಗಿಕೊಂಡಿದೆ. ಇದರ ಅಭಿವೃದ್ಧಿಗಾಗಿ ಉದ್ಯಮಗಳು ನಮ್ಮೊಂದಿಗೆ ಕೈಜೋಡಿಸಬೇಕು' ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಭಾನುವಾರ ಇಲ್ಲಿ ಮನವಿ ಮಾಡಿದ್ದಾರೆ.

                     'ರಾಕೆಟ್‌ ನಿರ್ಮಾಣ ಕಾರ್ಯದಲ್ಲಿ ಉದ್ಯಮಗಳ ಸಹಭಾಗಿತ್ವ ಪ್ರೋತ್ಸಾಹಿಸುವುದು ನಮ್ಮ ಉದ್ದೇಶ. ರಾಕೆಟ್‌ ಅಭಿವೃದ್ಧಿಗೆ ತಗಲುವ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುವುದು ಅಸಾಧ್ಯ. ಉದ್ಯಮಗಳೂ ಈ ಕಾರ್ಯದಲ್ಲಿ ಹೂಡಿಕೆ ಮಾಡಬೇಕು. ಭೂಸ್ಥಿರ ಕಕ್ಷೆಗೆ 10 ಟನ್‌ ತೂಕದ ಅಥವಾ ಕಡಿಮೆ ಎತ್ತರದ ಕಕ್ಷೆಗೆ 20 ಟನ್‌ ತೂಕದ ಉಪಗ್ರಹಗಳನ್ನು ಸಾಗಿಸುವ ರಾಕೆಟ್‌ ನಿರ್ಮಿಸುವುದು ನಮ್ಮ ಗುರಿ' ಎಂದು ಹೇಳಿದ್ದಾರೆ.

              'ಪಿಎಸ್‌ಎಲ್‌ವಿಯು 1980ರಲ್ಲಿದ್ದ ತಂತ್ರಜ್ಞಾನದ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿರುವ ರಾಕೆಟ್‌. ಇದರ ಮೂಲಕ ಮುಂದಿನ ದಿನಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುವುದು ಕಷ್ಟ' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries