ಕಾಸರಗೋಡು: ಕೃಷಿ ಇಲಾಖೆಯು ಕೆರಾಫೆಡ್ ಸಹಯೋಗದೊಂದಿಗೆ ವಲಿಯಪರಂಬ ಪಂಚಾಯಿತಿಯ ಸೇವಾ ಸಹಕಾರಿ ಬ್ಯಾಂಕ್ ಮೂಲಕ ರೈತರಿಂದ ನೇರವಾಗಿ ಹಸಿ ತೆಂಗನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಹಸಿ ತೆಂಗು ಖರೀದಿಯನ್ನು ಕೃಷಿಕರಿಂದ ಸ್ವೀಕರಿಸುವ ಮೂಲಕ ಶಾಸಕ ಎಂ ರಾಜಗೋಪಾಲನ್ ಉದ್ಘಾಟಿಸಿದರು. ಪಡನ್ನಕ್ಕಡಪ್ಪುರಂ ಬ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವಿ.ಸಜೀವನ್ ವಹಿಸಿದ್ದರು. ಪ್ರತಿ ಕೆಜಿಗೆ 32 ರೂ. ದರದಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ಹಸಿ ತೆಂಗು ಖರೀದಿಸುವ ಗುರಿಯಿರಿಸಿಕೊಳ್ಳಲಾಗಿದೆ.
ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾ ರಾಣಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ವಲಿಯಪರಂಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಿ.ಶ್ಯಾಮಲಾ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಖಾದರ್ ಪಾಂಡ್ಯಾಳ, ಕೆ.ಮನೋಹರನ್, ಆಡಳಿತ ಸಮಿತಿ ಸದಸ್ಯರಾದ ಎಂ.ಅಬ್ದುಲ್ ಸಲಾಂ, ಪಿ.ಕೆ.ಸುಮತಿ, ವಿ.ಮಧು, ಎಂ.ಟಿ.ಬುಶ್ರಾ, ವಿ.ಕೆ.ಕರುಣಾಕರನ್, ಸಿ.ನಾರಾಯಣನ್ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ವಿ.ಶಿವಕುಮಾರ್ ಸ್ವಾಗತಿಸಿದರು. ವಲಿಯಪರಂಬ ಬ್ಯಾಂಕ್ ಕಾರ್ಯದರ್ಶಿ ಕೆ.ಸಿ.ರಾಜಶ್ರೀ ವಂದಿಸಿದರು. ತೆಂಗಿನ ಬೆಲೆ ಕುಸಿತದಿಂದ ಕಂಗಾಲಾಗಿರುವ ಕೃಷಿರಕ ಪಾಲಿಗೆ ಸರ್ಕಾರದ ಮೂಲಕ ಹಸಿ ತೆಂಗು ಖರೀದಿ ಪ್ರಕ್ರಿಯೆ ಒಂದಷ್ಟು ಸಮಾಧಾನ ತಂದುಕೊಟ್ಟಿದೆ.
ಕೃಷಿ ಇಲಾಖೆ, ಕೇರಾಫೆಡ್ ಮೂಲಕ ಹಸಿ ತೆಂಗು ಖರೀದಿಗೆ ಚಾಲನೆ
0
ಅಕ್ಟೋಬರ್ 12, 2022
Tags