ಕಾಸರಗೋಡು: ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ 'ಯುವ ಉತ್ಸವ'ದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಚಿತ್ರಕಲೆ (ಜಲವರ್ಣ), ಕವನ (ಮಲಯಾಳಂ), ಮೊಬೈಲ್ ಫೆÇೀಟೋಗ್ರಫಿ, ಭಾಷಣ (ಇಂಗ್ಲಿಷ್ ಯಾ ಹಿಂದಿ), ಜಾನಪದ ನೃತ್ಯ ಗುಂಪು (5-15 ಜನರು) ಮತ್ತು ಯೂತ್ ಡಿಬೇಟ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 15 ಮತ್ತು 29 ರ ನಡುವಿನ ಹರೆಯದವರಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯು ಅಕ್ಟೋಬರ್ 15 ರ ಶನಿವಾರದಂದು ಪಡನ್ನಕ್ಕಾಡ್‍ನ ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ಒಬ್ಬ ವ್ಯಕ್ತಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ವಿಜೇತರು ಪ್ರಮಾಣಪತ್ರ, ಟ್ರೋಫಿ, ನಗದು ಬಹುಮಾನ ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 13. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(7736426247, 8136921959)ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನೆಹರೂ ಯುವಕೇಂದ್ರ ವತಿಯಿಂದ ಯುವ ಉತ್ಸವ ಸ್ಪರ್ಧೆಗಳು
0
ಅಕ್ಟೋಬರ್ 09, 2022