ಕೊಚ್ಚಿ: ಪಾಪ್ಯುಲರ್ ಫ್ರಂಟ್ ನಿಷೇಧದಿಂದಾಗಿ ಮುಸ್ಲಿಂ ಲೀಗ್ ನಲ್ಲಿ ಒಡಕು ತೀವ್ರವಾಗುತ್ತಿದೆ.
ಪಾಪ್ಯುಲರ್ ಫ್ರಂಟ್ ನಿμÉೀಧವನ್ನು ತೀವ್ರಗಾಮಿ ನಾಯಕರು ವಿರೋಧಿಸಿದ್ದರು. ಪಾಪ್ಯುಲರ್ ಫ್ರಂಟ್ ಅನ್ನು ನಿμÉೀಧಿಸಿದ್ದು ತಪ್ಪು ಎಂದು ಲೀಗ್ ನ ವಿಭಾಗವೊಂದು ಈಗಾಗಲೇ ಅಭಿಪ್ರಾಯಪಟ್ಟಿದೆ.
ನಾಯಕರ ನಡುವೆಯೇ ಭಿನ್ನಾಭಿಪ್ರಾಯ ಮೂಡಿದ್ದು, ಪದಾಧಿಕಾರಿಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಲೀಗ್‍ನ ಉಗ್ರ ಚಿಂತನೆಯ ಹಲವಾರು ವಿಷಯಗಳಲ್ಲಿ ಪಿಎಫ್‍ಐ ಅನ್ನು ರಹಸ್ಯವಾಗಿ ಬೆಂಬಲಿಸಿರುವರು. ಲೀಗ್ ನಾಯಕ ಇಟಿ ಮುಹಮ್ಮದ್ ಬಶೀರ್ ಅವರು ಪಿಎಫ್‍ಐ ರಾಷ್ಟ್ರೀಯ ಕಾರ್ಯದರ್ಶಿ ಎಳಮರಮ್ ನಸ್ರುದ್ದೀನ್ ಅವರನ್ನು ಭೇಟಿ ಮಾಡಿದ್ದು ದೊಡ್ಡ ವಿವಾದವಾಗಿತ್ತು.
ಒಂದು ವಿಭಾಗ ಇದನ್ನು ವಿರೋಧಿಸಿದರೆ, ಇನ್ನೊಂದು ವಿಭಾಗ ಅದನ್ನು ನಿರಾಕರಿಸದೆ ಬೆಂಬಲಿಸುತ್ತದೆ. ಪಿಎಫ್ ಐ ನಿಷೇಧವನ್ನು ಮೊದಲು ಸ್ವಾಗತಿಸಿದವರು ಲೀಗ್ ಮುಖಂಡ ಎಂ.ಕೆ.ಮುನೀರ್. ಆದರೆ ಪಿಕೆ ಕುನ್ಹಾಲಿಕುಟ್ಟಿ ಮತ್ತು ಪಿಎಂಎ ಸಲಾಂ ನಿಷೇಧವನ್ನು ಬಲವಾಗಿ ವಿರೋಧಿಸಿದರು.
ಪಾಪ್ಯುಲರ್ ಫ್ರಂಟ್ ನಿμÉೀಧದ ಬಗ್ಗೆ ಸ್ಪಷ್ಟ ಅಭಿಪ್ರಾಯವಿಲ್ಲದೇ ನಾಯಕತ್ವ ಗೊಂದಲಕ್ಕೊಳಗಾಗಿದೆ. ಲೀಗ್ ಮೃದು ಧೋರಣೆ ಪ್ರತಿಭಟಿಸಿ ಪಿಎಫ್ ಐ ಮತ್ತು ಎಸ್.ಡಿ.ಪಿ.ಐ ಗೆ ಕಾರ್ಯಕರ್ತರು ಹಿಂಡು ಹಿಂಡಾಗಿ ಹೋಗಿದ್ದರು. ಲೀಗ್‍ನೊಳಗಿನ ಮುಸ್ಲಿಂ ಉಗ್ರ ವಿಭಾಗ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಇಂತಹ ಭಿನ್ನಾಭಿಪ್ರಾಯ ಪಕ್ಷದಲ್ಲಿ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಪಾಪ್ಯುಲರ್ ಫ್ರಂಟ್ ನಿಷೇಧ: ಲೀಗ್‍ನಲ್ಲಿ ಭಿನ್ನಾಭಿಪ್ರಾಯ ಉಲ್ಬಣ
0
ಅಕ್ಟೋಬರ್ 03, 2022