ತಿರುವನಂತಪುರ: ನಿಷೇಧಿತ ಧಾರ್ಮಿಕ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್‍ನ ಅಖಿಲ ಭಾರತ ಅಧ್ಯಕ್ಷನಾಗಿದ್ದ ಒಎಂಎ ಸಲಾಂ ನನ್ನು ಕೆ.ಎಸ್.ಇ.ಬಿ. ವಜಾಗೊಳಿಸಿದೆ.
ಪಾಪ್ಯುಲರ್ ಫ್ರಂಟ್‍ನ ನಿಷೇಧ ಮತ್ತು ಅದರ ನಂತರದ ತನಿಖೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಒಎಂಎ ಸಲಾಂ ತಿಂಗಳುಗಳ ಕಾಲ ಅಮಾನತಿನಲ್ಲಿದ್ದ.
ಕೆಎಸ್‍ಇಬಿ ಬೆಳಗ್ಗೆ ವಜಾಗೊಳಿಸುವ ಸೂಚನೆ ನೀಡಿದೆ. ಸಲಾಂ ಮಂಜೇರಿಯ ಪ್ರಾದೇಶಿಕ ಲೆಕ್ಕ ಪರಿಶೋಧನಾ ಕಚೇರಿಯಲ್ಲಿ ಹಿರಿಯ ಲೆಕ್ಕ ಪರಿಶೋಧನಾ ಅಧಿಕಾರಿಯಾಗಿದ್ದ.
ಅನುಮತಿ ಪಡೆಯದೇ ವಿದೇಶ ಪ್ರವಾಸ ಕೈಗೊಂಡಿರುವುದು ಹಾಗೂ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಅಮಾನತಿನಲ್ಲಿದ್ದರೂ ನಿಯಮ ಉಲ್ಲಂಘಿಸಿ ಕೆಎಸ್‍ಇಬಿ ಸಲಾಂ ಗೆ ವೇತನ ಪಾವತಿಸಿರುವುದು ಕಂಡುಬಂದಿದೆ. ಇದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಸಲಾಂ ನ ವೇತನ 67,600 ರೂ. ಕಳೆದ ಆರ್ಥಿಕ ವರ್ಷದಲ್ಲಿ ನಿಯಮ ಉಲ್ಲಂಘಿಸಿ 7.84 ಲಕ್ಷ ರೂ.ಗಳನ್ನು ಸಲಾಂ ಗೆ ವೇತನ ನೀಡಿರುವುದು ಕಂಡುಬಂದಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸಿದ ಪ್ರಕರಣದಲ್ಲಿ ಒಎಂಎ ಸಲಾಮ್ ಪ್ರಸ್ತುತ ಬಂಧನದಲ್ಲಿದ್ದಾನೆ.
ಸರ್ಕಾರದ ಸಂಬಳ ಪಡೆದು ಪಾಪ್ಯುಲರ್ ಫ್ರಂಟ್ ನ ನೇತೃತ್ವ: ಒಎಂಎ ಸಲಾಂ ನನ್ನು ವಜಾಗೊಳಿಸಿ ಕೆ.ಎಸ್.ಇ.ಬಿ
0
ಅಕ್ಟೋಬರ್ 04, 2022