ಕಾಸರಗೋಡು: ಮಾಂತ್ರಿಕ ಚಿಕತ್ಸೆ ನೀಡುವ ನೆಪದಲ್ಲಿ ವಡಗರದ ಮನೆಯೊಂದರಿಂದ ಏಳುವರೆ ಪವನು ಚಿನ್ನ ಹಾಗೂ ಒಂದೂಕಾಲು ಲಕ್ಷ ರೂ. ನಗದು ಕಳವುಗೈದಿರುವ ಬಗ್ಗೆ ವಡಗರ ಠಾಣೆ ಪೊಲೀಸರು ಉಪ್ಪಳ ನಿವಾಸಿಯೆನ್ನಲಾದ ಮಹಮ್ಮದ್ ಶಾಫಿ ಎಂಬಾತನ ವಿರುದ್ಧ ವಡಗರ ಪಾಲೋಲಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಡಗರ ತಿಕ್ಕೋಡಿ ಕೊಡಿಕ್ಕಲ್ ಎಂಬಲ್ಲಿ ಮದ್ರಸಾ ಶಿಕ್ಷಕರಾಗಿರುವ ಮೂಲತ: ಪಾಲ್ಘಾಟ್ ಮುಟ್ಟತ್ತಲ ನಿವಸಿ ಇಸ್ಮಾಯಿಲ್ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ನಾಲ್ಕು ತಿಂಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಇಸ್ಮಾಯಿಲ್ ಅವರನ್ನು ಮಹಮ್ಮದ್ ಶಾಫಿ ಪರಿಚಯಮಾಡಿಕೊಂಡಿದ್ದು, ಇದೇ ಪರಿಚಯದಲ್ಲಿ ಮಂತ್ರವಾದ ಚಿಕಿತ್ಸೆ ಬಗ್ಗೆ ಇವರ ಮನೆಗೆ ಆಗಮಿಸಿದ್ದನು. ಈತನಿಗೆ ತಮ್ಮ ಮನೆ ಸನಿಹ ಕೊಠಡಿ ನೀಡಿ, ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸೆ. 22ರಂದು ನಮಾಜ್ ಮಾಡಲು ಮನೆಯೊಳಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದನು. ಮನೆಯವರೊಂದಿಗೆ ಹೆಚ್ಚು ಆತ್ಮೀಯತೆ ಹೊಂದಿದ್ದ ಈತನಿಗೆ ಮನೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದರು. ಇದಾದ ಒಂದೆರಡು ದಿವಸದಲ್ಲಿ ಈತ ಪರಾರಿಯಾಗಿದ್ದನು. ಎರಡು ದಿವಸಗಳ ನಂತರ ಮನೆ ಕಪಾಟಿನಲ್ಲಿರಿಸಿದ್ದ ನಗ, ನಗದು ಕಾಣೆಯಾಗಿದ್ದು, ಇದು ಈತನ ಕೃತ್ಯವಚೆಂದು ಸಂಶಯಿಸಲಾಗಿದೆ. ಈ ಬಗ್ಗೆ ಇಸ್ಮಾಯಿಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಳ ನಿವಾಸಿ ಎಂದು ಈತ ಪರಿಚಯ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮಾಂತ್ರಿಕ ಚಿಕಿತ್ಸೆ ನೆಪದಲ್ಲಿ ಮನೆಯಿಂದ ಚಿನ್ನಾಭರಣ, ನಗದು ಕಳವು: ಉಪ್ಪಳ ನಿವಾಸಿಗಾಗಿ ಹುಡುಕಾಟ
0
ಅಕ್ಟೋಬರ್ 13, 2022
Tags