HEALTH TIPS

ಪ್ರಧಾನಿ ಮೋದಿ ಪ್ರೇರಣೆ: ಪಾಕೆಟ್ ಮನಿ ಉಳಿಸಿ ಶೌಚಾಲಯ ಕಟ್ಟಿಸಲು ಯುವತಿ ಸಹಾಯ

 

             ಜಮ್‌ಶೆಡ್‌ಪುರ: ಜಾರ್ಖಂಡ್‌ ಮೂಲದ ಯುವತಿಯೊಬ್ಬರು ಪೋಷಕರು ನೀಡಿದ ಪಾಕೆಟ್‌ ಮನಿ ಸಂಗ್ರಹಿಸಿಟ್ಟುಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ನೆರವು ನೀಡುವ ಮೂಲಕ ಗಮನ ಸೆಳೆದಿದ್ದಾರೆ.

               'ನಾನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಸ್ವಚ್ಛ ಭಾರತ್‌ ಅಭಿಯಾನದಿಂದ ಪ್ರೇರಿತಳಾಗಿದ್ದೇನೆ.

ಶೌಚಾಲಯ ಸಮಸ್ಯೆಯಿಂದಾಗಿ ಹೆಣ್ಣುಮಕ್ಕಳು ಶಿಕ್ಷಣ ತ್ಯಜಿಸುವುದನ್ನು ನಾನು ಅರಿತಿದ್ದೇನೆ. ಅದಕ್ಕಾಗಿ 2014ರಿಂದ ಪಾಕೆಟ್ ಮನಿ ಉಳಿಸಲು ಪ್ರಾರಂಭಿಸಿದೆ' ಎಂದು ಮಾಂಡ್ರಿಟಾ ಚಟರ್ಜಿ ತಿಳಿಸಿದ್ದಾರೆ.


               'ಇದುವರೆಗೆ ₹24 ಸಾವಿರ ಪಾಕೆಟ್‌ ಮನಿ ಉಳಿತಾಯ ಮಾಡಿದ್ದೇನೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ₹12 ಸಾವಿರ ಸಹಾಯಧನ ನೀಡುವ ಯೋಜನೆ ಬಗ್ಗೆ ತಿಳಿದುಕೊಂಡಿದ್ದೇನೆ. ಅದರಂತೆ ತೆಲಂಗಾಣದ ಒಂದು ಹಳ್ಳಿಯಲ್ಲಿ 2 ಶೌಚಾಲಯಗಳನ್ನು ನಿರ್ಮಿಸಲು ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ' ಎಂದು ಮಾಂಡ್ರಿಟಾ ಹೇಳಿಕೊಂಡಿದ್ದಾರೆ.

          ಸದ್ಯ, ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಲು ಸಹಾಯ ಮಾಡುತ್ತಿದ್ದೇನೆ ಎಂದು ಚಟರ್ಜಿ ತಿಳಿಸಿದ್ದಾರೆ.

Jamshedpur, Jharkhand | Girl uses pocket money to build toilets During launch of PM Modi's Swachh Bharat, I realised several girls dropping their education because of lack of toilets. I started saving pocket money. B/w 2014-2016 I saved Rs 24000: Mondrita Chatterjee (1/2)
Image
Image
Image
Image
I was told of govt scheme where I could give Rs 12,000 for a toilet to be constructed. In 2016, I helped construct 2 toilets in a small village of Telangana. A year later, I helped construct a toilet with 'eco-bricks' using plastic bottles: Student Mondrita Chatterjee (2/2)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries