ಕಾಸರಗೋಡು: ಆಪರೇಷನ್ ಯೆಲ್ಲೋ ಅಂಗವಾಗಿ ಎಎವೈ (ಅಂತ್ಯೋದಯ ಅನ್ನಯೋಜನಾ), ಬಿಪಿಎಲ್ (ಆದ್ಯತೆ) ಮತ್ತು ಸಬ್ಸಿಡಿ ವರ್ಗದ ಪಡಿತರ ಚೀಟಿಗಳನ್ನು ಅಕ್ರಮವಾಗಿ ಹೊಂದಿರುವವರನ್ನು ಪತ್ತೆ ಹಚ್ಚಲು ಮನೆಗಳಿಗೆ ತೆರಳಿ ತಪಾಸಣೆ ಚುರುಕುಗೊಳಿಸಲಾಗಿದೆ.
ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿ ಮತ್ತು ತಾಲೂಕು ಸರಬರಾಜು ಅಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಪಾಸಣೆ ಅಕ್ಟೋಬರ್ ತಿಂಗಳಿನಲ್ಲಿ ಈವರೆಗೆ ಜಿಲ್ಲೆಯಲ್ಲಿ ಒಟ್ಟು 159 ಕಾರ್ಡ್ ಗಳನ್ನು ವಶಪಡಿಸಿಕೊಂಡು ಎಪಿಎಲ್ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲಾಗಿದೆ. ಹೊಸದುರ್ಗ ತಾಲೂಕಿನಲ್ಲಿ ಶುಕ್ರವಾರ ಜಿಲ್ಲಾ ಸರಬರಾಜು ಅಧಿಕಾರಿ ಎನ್.ಜೆ.ಶಾಜಿಮೋನ್ ನೇತೃತ್ವದಲ್ಲಿ ಸುಮಾರು 26 ಮನೆಗಳಲ್ಲಿ ತಪಾಸಣೆ ನಡೆಸಿ 13 ಕಾರ್ಡ್ ಗಳನ್ನು ವಶಪಡಿಸಿಕೊಂಡು ಎಪಿಎಲ್ ಸಾಮಾನ್ಯ ವರ್ಗಕ್ಕೆ ವರ್ಗಾಯಿಸಲಾಗಿದೆ.
ಅನಧಿಕೃತವಾಗಿ ಪಡಿತರ ಪಡೆಯಲಾದ ಕಾರ್ಡುದಾರರಿಗೆ, ಅವರು ಪಡೆದುಕೊಂಡಿರುವ ಸಾಮಗ್ರಿಗಳ ಮಾರುಕಟ್ಟೆ ಬೆಲೆಯನ್ನು ವಿಧಿಸುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ತಪಾಸಣೆಯಲ್ಲಿ ತಾಲೂಕು ಸರಬರಾಜು ಅಧಿಕಾರಿ ಕೆ.ಎನ್.ಬಿಂದು, ಪಡಿತರ ನಿರೀಕ್ಷಕರಾದ ಪಿ.ಹರಿದಾಸ್, ಕೆ.ಕೆ.ರಾಜೀವ್, ಟಿ.ರಾಧಾಕೃಷ್ಣನ್, ಚಾಲಕ ಪಿ.ಬಿ.ಅನ್ವರ್ ಪಾಲ್ಗೊಂಡಿದ್ದರು. ಎ.ಎ.ವೈ, ಪಿ.ಎಚ್.ಎಚ್ ಮತ್ತು ಸಬ್ಸಿಡಿ ಆದ್ಯತಾ ಕಾರ್ಡ್‍ಗಳನ್ನು ಅನಧಿಕೃತವಾಗಿ ಹೊಂದಿರುವವರಿಗೆ ದಂಡ ವಿಧಿಸಲಾಗುವುದು, ಅಲ್ಲದೆ ಮುಂದಿನ ದಿನಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗುವುದು ಎಂದು ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಮಾಹಿತಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ನೂರಾರು ಮಂದಿ ಅನಧಿಕೃತವಾಗಿ ಬಿಪಿಎಲ್ ಕಾರ್ಡು ಹೊಂದಿದ್ದರೆ, ಹಲವು ಮಂದಿ ಅರ್ಹತೆಯಿದ್ದರೂ, ಇನ್ನೂ ಎಪಿಎಲ್ ಕಾರ್ಡಿನಲ್ಲಿ ಮುಂದುವರಿಯುತ್ತಿರುವುದನ್ನು ಮನಗಂಡು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
'ಆಪರೇಷನ್ ಯೆಲ್ಲೋ' ಅನಧಿಕೃತ ಪಡಿತರ ಚೀಟಿ ಪತ್ತೆಗೆ ಕಾರ್ಯಾಚರಣೆ
0
ಅಕ್ಟೋಬರ್ 29, 2022
Tags