ಕಾಸರಗೋಡು: ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರು ರಚಿಸಿರುವ ಬೇರುಗಳು ಅಮ್ಮನ ಹಾಗೆ ಮತ್ತು ಎದೆ ಬಿಗಿವ ಕ್ಷಣಗಳು ಎಂಬ ಕೃತಿಗಳ ಬಿಡುಗಡೆ ಸಮಾರಂಭ ನ. 6ರಂದು ಬೆಳಗ್ಗೆ 9.30ಕ್ಕೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 'ಅನಂತಶ್ರೀ'ಸಭಾಂಗಣದಲ್ಲಿ ಜರುಗಲಿರುವುದು.
ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಕೃತಿ ಬಿಡುಗಡೆಗೊಳಿಸುವರು. ಸಾಹಿತಿ, ವೈದ್ಯ ಡ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿ, ಬೇರುಗಳು ಅಮ್ಮನ ಹಾಗೆ ಕೃತಿಯ ಬಗ್ಗೆ ಮಾತನಾಡುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ ಅವರು ಎದೆ ಬಿಗಿದ ಕ್ಷಣಗಳು ಕೃತಿಯ ಬಗ್ಗೆ ಮಾತನಾಡುವರು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅತಿಥಿಯಾಗಿ ಭಾಗವಹಿಸುವರು.
ಸಾಹಿತಿ ಶ್ರೀಕೃಷ್ಣ ಅನಂತಪುರ ಅವರ ಕೃತಿಗಳ ಬಿಡುಗಡೆ ಸಮಾರಂಭ
0
ಅಕ್ಟೋಬರ್ 19, 2022