HEALTH TIPS

ಹಿರಿಯ ನಟ ದತ್ತಣ್ಣ, ಅವಿನಾಶ್ ಸೇರಿದಂತೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

 

           ಬೆಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳು, ಸಂಸ್ಥೆಗಳಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಸರ್ಕಾರ ಅನುಸರಿಸಿಕೊಂಡು ಬಂದಿದ್ದು, ಈ ಬಾರಿ ಚಲನಚಿತ್ರ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್, ಕಿರುತೆರೆ ಕ್ಷೇತ್ರದಲ್ಲಿ ಸಿಹಿಕಹಿ ಚಂದ್ರು, ಲೇಖಕ ಅ.ರಾ. ಮಿತ್ರಾ ಸೇರಿದಂತೆ   67 ಸಾಧಕರು ಹಾಗೂ 10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ಆದೇಶಿಸಿದೆ. 

                 ಪತ್ರಿಕೋದ್ಯಮ- ಬೆಂಗಳೂರಿನ ಹೆಚ್.ಆರ್. ಶ್ರೀಶಾ, ಗದಗ ಜಿಲ್ಲೆಯ ಜಿ.ಎಂ. ಶಿರಹಟ್ಟಿ,  ವಿಜ್ಞಾನ ಮತ್ತು ತಂತ್ರಜ್ಞಾನ- ಬೆಂಗಳೂರಿನ ಇಸ್ರೋ ಸಂಸ್ಥೆ ಮಾಜಿ ನಿರ್ದೇಶಕ ಕೆ. ಶಿವನ್,ರಾಯಚೂರಿನ ಡಾ. ಡಿ.ಆರ್ ಬಳೂರಗಿ, ಕೃಷಿ- ಕೊಡಗಿನ ಗಣೇಶ್ ತಿಮ್ಮಯ್ಯ, ಚಿಕ್ಕಮಗಳೂರಿನ ಚಂದ್ರಶೇಖರ್ ನಾರಾಯಣಪುರ, ಪರಿಸರ- ರಾಮನಗರದ ಸಾಲುಮರದ ನಿಂಗಣ್ಣ, ಪೌರಕಾರ್ಮಿಕ - ಮಲ್ಲಮ್ಮ ಹೂವಿನ ಹಡಗಲಿ,  ಆಡಳಿತ- ಡಾ. ಎಲ್.ಎಚ್. ಮಂಜುನಾಥ್, ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನೆ ಶಿವಮೊಗ್ಗ, ಮಧನ್ ಗೋಪಾಲ್ ಬೆಂಗಳೂರು ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 


                   "೨೦೨೧-೨೨ನೇ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಗೆ ಆಯ್ಕೆಯಾಗಿರುವ ಎಲ್ಲ ಸಾಧಕರು ಹಾಗೂ  'ಅಮೃತ ಮಹೋತ್ಸವ ರಾಜ್ಯಪ್ರಶಸ್ತಿ' ಪುರಸ್ಕೃತ ರಾಜ್ಯದ ೧೦ ಸಂಘ-ಸಂಸ್ಥೆಗಳನ್ನು ಅಭಿನಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಎಲ್ಲ ಸಾಧಕರ ಸಾಧನೆಗಳು ಯುವಜನತೆಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ. ಹಾಗೆಯೇ, ಸಾಧಕರನ್ನು ಗುರುತಿಸುವಲ್ಲಿ ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸಿರುವ  ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

Thread

Conversation

"೨೦೨೧-೨೨ನೇ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಗೆ ಆಯ್ಕೆಯಾಗಿರುವ ಎಲ್ಲ ಸಾಧಕರಿಗೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ 'ಅಮೃತ ಮಹೋತ್ಸವ ರಾಜ್ಯಪ್ರಶಸ್ತಿ' ಪುರಸ್ಕೃತ ರಾಜ್ಯದ ೧೦ ಸಂಘ-ಸಂಸ್ಥೆಗಳಿಗೆ, ನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು." 1/2

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries