ಕೊಚ್ಚಿ: ಇಳಂತೂರು ಜೋಡಿ ನರಬಲಿ ಪ್ರಕರಣದ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಭಗವಾಲ್ ಸಿಂಗ್ ಮತ್ತು ಲೈಲಾ ಅವರ ಪೋನ್ ಪತ್ತೆಯಾಗಿಲ್ಲ.
ಸೈಬರ್ ಪುರಾವೆಗಳ ಸಂಗ್ರಹವೂ ನಡೆಯುತ್ತಿದೆ. ಆರೋಪಿಗಳ ವಿಚಾರಣೆಯಿಂದ ತನಿಖಾ ತಂಡಕ್ಕೆ ಮಹತ್ವದ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.
ಹತ್ಯೆಗೀಡಾದ ಪದ್ಮಾ ಮತ್ತು ರೋಸ್ಲಿಯ ಮಾಂಸವನ್ನು ಶಫಿ ಕೊಚ್ಚಿಗೆ ತಂದಿರುವ ಸೂಚನೆಗಳಿವೆ. ಜೂನ್ ಮೊದಲ ವಾರ ಮತ್ತು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹತ್ಯೆಗಳು ನಡೆದಿವೆ. ಎರಡು ಬಾರಿಯೂ ಶಫಿ ಮಾಂಸ ತೆಗೆದುಕೊಂಡಿದ್ದ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಸ್ಪಷ್ಟವಾಗಿಲ್ಲ.
ಅಲೌಕಿಕ ಶಕ್ತಿಯನ್ನು ಪಡೆಯಲು ಮಾನವ ಮಾಂಸವನ್ನು ತಿನ್ನುವ ಕೆಲವು ಜನರು ನನಗೆ ತಿಳಿದಿದ್ದಾರೆ ಮತ್ತು ಅವರಿಗೆ ಮಾಂಸವನ್ನು ಮಾರಾಟ ಮಾಡುತ್ತಿರುವೆ ಎಂದು ಶಫಿ ಹೇಳಿದ್ದ ಎಂದು ಸಹ ಆರೋಪಿಗಳಾದ ಭಗ್ವಾಲ್ ಸಿಂಗ್ ಮತ್ತು ಲೈಲಾ ಈ ಹಿಂದೆ ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ನಿನ್ನೆ ಪೋಲೀಸರು ಶಫಿಯ ಹೋಟೆಲ್ ನಲ್ಲಿ ತಪಾಸಣೆ ನಡೆಸಿದ್ದರು.
ಅಲೌಕಿಕ ಶಕ್ತಿ ಪಡೆಯಲು ಕೆಲವರು ಮಾನವ ಮಾಂಸ ಸೇವಿಸುತ್ತಾರೆ: ಎರಡು ಬಾರಿ ಕೊಚ್ಚಿಗೆ ಮಾಂಸ ಕೊಂಡೊಯ್ಯಲಾಗಿತ್ತು: ವರದಿ: ಶಾಫಿಯ ಹೋಟೆಲ್ ನಲ್ಲೂ ಬಡಿಸಿರುವ ಸಾಧ್ಯತೆ?
0
ಅಕ್ಟೋಬರ್ 20, 2022
Tags