ನವದೆಹಲಿ: ಟಿ.ವಿ ವಾಹಿನಿಗಳಿಗೆ ಉಪಗ್ರಹಗಳ ಸಂಪರ್ಕ ಕಲ್ಪಿಸಲು ಸದ್ಯ ಭಾರತದಲ್ಲಿ ಇರುವ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಸಡಿಲಿಸಲಿದೆ.
ಶುಕ್ರವಾರ ಇಲ್ಲಿ ನಡೆದ 'ಭಾರತ ಬಾಹ್ಯಾಕಾಶ ಸಮಾವೇಶ'ದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಪೂರ್ವಚಂದ್ರ ಈ ಮಾಹಿತಿ ನೀಡಿದರು.
ಪ್ರಸ್ತುತ, ಭಾರತದಲ್ಲಿ 898 ಟಿ.ವಿ.ವಾಹಿನಿಗಳು ಇದ್ದು, 532 ವಾಹಿನಿಗಳು ತಮ್ಮ ಕಾರ್ಯಕ್ರಮಗಳ ಪ್ರಸಾರಕ್ಕಾಗಿ ವಿದೇಶಿ ಉಪಗ್ರಹಗಳನ್ನು ಅವಲಂಬಿಸಿವೆ.
ಭಾರತವು ಉಪಗ್ರಹಗಳ ಸಂಪರ್ಕ ಕೇಂದ್ರವಾಗಬೇಕು ಎಂಬ ಹಿನ್ನೆಲೆಯಲ್ಲಿ ಈ ನಿರ್ಬಂಧ ಸಡಿಲಿಸಲು ನಿರ್ಧರಿಸಲಾಗಿದೆ. ಉಪಗ್ರಹ ಸಂಪರ್ಕ ಕುರಿತ ಮಾರ್ಗದರ್ಶಿ ಸೂತ್ರಗಳನ್ನು 2011ರಲ್ಲಿ ನೀಡಲಾಗಿತ್ತು. ಈಗ ಅದನ್ನು ತಿಂಗಳೊಳಗೆ ಪರಿಷ್ಕರಿಸಲಾಗುವುದು. ಪ್ರಸ್ತುತ ನೆರೆಯ ನೇಪಾಳ, ಶ್ರೀಲಂಕಾ, ಭೂತಾನ್‌ನ ವಾಹಿನಿಗಳೂ ಭಾರತದಿಂದಲೇ ತಮ್ಮ ಕಾರ್ಯಕ್ರಮಗಳನ್ನು ಉಪಗ್ರಹಕ್ಕೆ ಸಂಪರ್ಕ ಕಲ್ಪಿಸುತ್ತಿವೆ ಎಂದರು.