ಮಧೂರು: ಉಳಿಯತ್ತಡ್ಕ ಗಣೇಶ ನಗರದ ಶ್ರೀ ಶಕ್ತಿ ಭಜನಾ ಮಂದಿರದ ಪರಿಸರದಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಕ್ತಿ ಸಭಾ ಭವನದ ಪ್ರವೇಶೋತ್ಸವ ವಿಜೃಂಭಣೆಯಿಂದ ಜರಗಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಅಧ್ಯಕ್ಷತೆ ವಹಿಸಿದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅನುಗ್ರಹ ಭಾಷಣ ಮಾಡಿದರು. ಕುಂಟಾರು ರವೀಶ ತಂತ್ರಿ ಶುಭಾಶಂಸನೆಗೈದರು. ಮಧೂರು ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಪಿ.ಮುರಳೀಧರನ್, ಪುಷ್ಪಲತ ಎಂ.ಶೆಟ್ಟಿ, ಸುಕುಮಾರ ಕುದ್ರೆಪ್ಪ್ರಾಡಿ, ನಳಿನಿ ನಾರಾಯಣ ನಾಯ್ಕ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶೀನ ಶೆಟ್ಟಿ ಕಜೆ, ರತೀಶ್ ಉಳಿಯತ್ತಡ್ಕ, ಶ್ರೀಧರ ಗಟ್ಟಿ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಜನಾರ್ದನ ಕುನ್ನಿಲ್, ಗೋಪಾಲ ಯು, , ಪ್ರಭಾಕರ ಉಳಿಯ, ಜನಾರ್ಧನ ಮೊದಲಾದವರು ಶುಭ ಹಾರೈಸಿದರು. ಸಭಾ ಭವನದ ನೇತೃತ್ವ ವಹಿಸಿದ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ಶಕ್ತಿ ಭಜನಾ ಮಂದಿರದ ಅಧ್ಯಕ್ಷ ಸಂತೋμï ಆರ್.ಗಟ್ಟಿಯವರನ್ನು ಉಳಿಯತ್ತಡ್ಕ ವೀರ ಹನುಮಾನ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂತೋμï ಆರ್.ಗಟ್ಟಿ ಸ್ವಾಗತಿಸಿ, ದಿನೇಶ್ ಬಂಬ್ರಾಣ ವಂದಿಸಿದರು. ಶಂಕರ ಜೆ.ಪಿ.ನಗರ, ದಿವ್ಯಾ ಗಟ್ಟಿ ಪರಕ್ಕಿಲ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಪ್ರವೇಶೋತ್ಸವದ ಮೊದಲ ದಿನ ಕಬಡ್ಡಿ ಸಹಿತ ವಿವಿದ ಸ್ಪರ್ಧೆಗಳು ಜರಗಿದ್ದು, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಬಹುಮಾನ ವಿತರಿಸಿದರು.
ಉಳಿಯತ್ತಡ್ಕದಲ್ಲಿ ಶ್ರೀ ಶಕ್ತಿ ಸಭಾ ಭವನದ ಪ್ರವೇಶೋತ್ಸವ
0
ಅಕ್ಟೋಬರ್ 08, 2022
Tags