ಕಾಸರಗೋಡು: ಮಾಯಿಪ್ಪಾಡಿ ಸನಿಹ ಕಣ್ಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್‍ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟುಕರಕಲಾಗಿದೆ. ಇಲ್ಲಿನ ನಿವಾಸಿ ಅಬ್ಬಾಸ್ ಎಂಬವರು ಸಂಚರಿಸುತ್ತಿದ್ದ ಸ್ಕೂಟರ್ ಚಿರುಬಯಲ್ ಎಂಬಲ್ಲಿಗೆ ತಲುಪಿದಾಗ ಏಕಾಏಕಿ ಸ್ಥಗಿತಗೊಂಡಿದ್ದು, ಸ್ಕೂಟರಲ್ಲಿದ್ದ ದಾಖಲೆಪತ್ರಗಳನ್ನು ಹೊರ ತೆಗೆಯುತ್ತಿದ್ದಂತೆ ಹೊಗೆ ಕಾಣಿಸಿಕೊಂಡು, ತಕ್ಷಣ ಬೆಂಕಿ ಸ್ಕೂಟರನ್ನು ಆವರಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸಥಳಕ್ಕಾಗಮಿಸಿ ಬೆಂಕಿ ಶಮನಗೊಳಿಸಿದ್ದರೂ, ಸ್ಕೂಟರ್ ಸಂಪೂರ್ಣ ಉರಿದು ನಾಶಗೊಂಡಿತ್ತು.
ಸಂಚರಿಸುತ್ತಿದ್ದ ಸ್ಕೂಟರ್‍ಗೆ ಬೆಂಕಿ: ಕ್ಷಣಾರ್ಧದಲ್ಲಿ ನಾಶ
0
ಅಕ್ಟೋಬರ್ 17, 2022