ತಿರುವನಂತಪುರ: ದೇಹ ಸೌಂದರ್ಯ ಸ್ಪರ್ಧೆಗಳನ್ನು ಆಯೋಜಿಸಲು ಕೇರಳ ಪೋಲೀಸರು ಮುಂದಾಗಿದ್ದಾರೆ. ಅಕ್ಟೋಬರ್ 8 ರಂದು (ಶನಿವಾರ), ಪೆÇಲೀಸರು ತಿರುವನಂತಪುರದ ಗಾಂಧಿ ಪಾರ್ಕ್‍ನಲ್ಲಿ ದೇಹ ಸೌಂದರ್ಯ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಮಿಸ್ಟರ್ ಕೇರಳ ಪೆÇಲೀಸ್ 2022 ಪ್ರಶಸ್ತಿಯನ್ನು ನೀಡಲಾಗುವುದು. ಹತ್ತು ವಿಷಯಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಕೇರಳ ಪೆÇಲೀಸರು ಮಾಹಿತಿ ನೀಡಿದರು.
ಶನಿವಾರ ಸಂಜೆ 6 ಗಂಟೆಗೆ ಈಸ್ಟ್ ಪೋರ್ಟ್ ಗಾಂಧಿ ಪಾರ್ಕ್‍ನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಪೆÇಲೀಸ್ ವರಿಷ್ಠ ಅನಿಲ್ ಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಲಾಂಗನ್ ಸೆಂಟರ್ ಫಾರ್ ಡ್ಯಾನ್ಸ್ ಅಂಡ್ ಮ್ಯೂಸಿಕ್‍ನಿಂದ ಶಾಸ್ತ್ರೀಯ ನೃತ್ಯ, ಮನು ಪೂಜಾಪುರ ಅವರಿಂದ ಮ್ಯಾಜಿಕ್ ಶೋ, ನೇಹಾ ಪ್ರದೀಪ್ ಮತ್ತು ತಂಡದಿಂದ ಹಾಡು ಮೇಳ, ಮಂತ್ರ ಡ್ಯಾನ್ಸ್ ಮತ್ತು ಫಿಟ್‍ನೆಸ್ ಸ್ಟುಡಿಯೊದಿಂದ ಫ್ಯೂಷನ್ ಡ್ಯಾನ್ಸ್ ಮತ್ತು ಕೇರಳ ಪೆÇಲೀಸ್ ಮಹಿಳಾ ಜಿಮ್ ತಂಡದಿಂದ ತಿರುವಾತಿರ ನಡೆಯಲಿದೆ.
ಕೇರಳ ಪೋಲೀಸರಿಂದ ಸೌಂದರ್ಯ ಸ್ಪರ್ಧೆ ಮತ್ತು ಮಹಿಳಾ ಜಿಮ್ ತಂಡದ ತಿರುವಾದಿರ ಶನಿವಾರ
0
ಅಕ್ಟೋಬರ್ 07, 2022