ಕುಂಬಳೆ: ವಿವಿಧ ಚಟುವಟಿಕೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಾಗ ಸಂಘಟನೆಯು ಬಲಿಷ್ಠವಾಗುತ್ತದೆ. ರಾಜ್ಯ ಸಮಿತಿಯ ಆದೇಶವನ್ನು ಜಿಲ್ಲಾ ಸಮಿತಿ, ವಲಯ ಸಮಿತಿ, ಹಾಗೂ ಘಟಕ ಸಮಿತಿಗಳು ಕಾರ್ಯರೂಪಕ್ಕೆ ತರುವಲ್ಲಿ ಮುತುವರ್ಜಿ ವಹಿಸಬೇಕು. ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿಯು ಗೌರವವನ್ನು ಪಡೆಯುತ್ತಾನೆ ಎಂದು ಎಕೆಪಿಎ(ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್) ಕಾಸರಗೋಡು ಜಿಲ್ಲಾ ಅಧ್ಯಕ್ಷ ಎನ್.ಎ. ಭರತನ್ ಅಭಿಪ್ರಾಯಪಟ್ಟರು.
ಮಂಗಳವಾರ ಕುಂಬಳೆ ಪೈ ಸಭಾಂಗಣದಲ್ಲಿ ಜರಗಿದ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕುಂಬಳೆ ವಲಯದ 4ನೇ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಎಕೆಪಿಎ ಕುಂಬಳೆ ವಲಯ ಅಧ್ಯಕ್ಷ ಸುನಿಲ್ ಮಂಜೇಶ್ವರ ಧ್ವಜಾರೋಹಣಗೈದು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು ಎ. ಜಿಲ್ಲಾ ವರದಿಯನ್ನು ತಿಳಿಸಿದರು. ರಾಜ್ಯ ನೇಚರ್ ಕ್ಲಬ್ ಸಂಚಾಲಕ ಗೋವಿಂದನ್ ಚೆಂಗರಂಗಾಡು, ರಾಜ್ಯಸಮಿತಿ ಸದಸ್ಯ ಹಾಗೂ ಕ್ಷೇಮನಿಧಿ ಸಂಚಾಲಕ ಹರೀಶ್ ಪಾಲಕ್ಕುನ್ನು, ಜಿಲ್ಲಾ ಉಪಾಧ್ಯಕ್ಷ ವಿಜಯನ್ ಶೃಂಗಾರ್, ಜಿಲ್ಲಾ ಕೋಶಾಧಿಕಾರಿ ವೇಣು ವಿ.ವಿ., ಕುಂಬಳೆ ವಲಯ ಉಸ್ತುವಾರಿ ಸಂಜೀವ ರೈ ಶುಭಾಶಂಸನೆಗೈದರು. ಎಕೆಪಿಎ ಕುಂಬಳೆ ವಲಯ ಕಾರ್ಯದರ್ಶಿ ಸುರೇಶ್ ಆಚಾರ್ಯ ವರದಿ ಹಾಗೂ ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪ್ಲಸ್‍ಟು ನಲ್ಲಿ ಉನ್ನತ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ನಂತರ ನೂತನ ಸಮಿತಿಯನ್ನು ರೂಪಿಸಲಾಯಿತು. ಕುಂಬಳೆ, ಉಪ್ಪಳ, ಬದಿಯಡ್ಕ ಘಟಕಗಳನ್ನೊಂಡ ಕುಂಬಳೆ ವಲಯ ಸಮಿತಿಯ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಎಕೆಪಿಎ ಸದಸ್ಯರಿಗಾಗಿರುವ `ಸಾಂತ್ವನ' ಯೋಜನೆಯ ಕುರಿತು ಮಾಹಿತಿಯನ್ನು ನೀಡಲಾಯಿತು. ನವಂಬರ್ 8ರಂದು ನೀಲೇಶ್ವರದಲ್ಲಿ ಕಾಸರಗೋಡು ಜಿಲ್ಲಾ ಸಮ್ಮೇಳನ ಹಾಗೂ ಡಿಸೆಂಬರ್ 19 ರಂದು ತಿರುವನಂತಪುರದಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕರೆನೀಡಲಾಯಿತು.
ಎಕೆಪಿಎ ಕುಂಬಳೆ ವಲಯ ಸಮ್ಮೇಳನ: ಸಂಘಟನೆಯ ಚಟುವಟಿಕೆಗಳಲ್ಲಿ ಸದಸ್ಯರು ಪಾಲ್ಗೊಳ್ಳಬೇಕು: ಎನ್.ಎ.ಭರತನ್
0
ಅಕ್ಟೋಬರ್ 12, 2022
Tags