ಕಾಸರಗೋಡು: ಕರ್ನಾಟಕ ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡಘಟಕ ವತಿಯಿಂದ 'ಕಲೋಪಾಸನೆ'ಎಂಬ ವಿಶಿಷ್ಟ ಹೆಸರಿನ ಕಾರ್ಯಕ್ರಮ ಅ. 8ಹಾಗೂ 9ರಂದು ಕಾಸರಗೋಡು ನುಳ್ಳಿಪ್ಪಾಡಿಯ ಹವ್ಯಕ ಭವನದಲ್ಲಿ ಜರುಗಲಿದೆ. ಅ. 8ರಂದು ಮಧ್ಯಾಹ್ನ 2ಗಂಟೆಗೆ ನಡೆಯುವ ಸಮಾರಂಭವನ್ನು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದ ಡಾ ಸಿ. ಸೋಮಶೇಖರ್ ಉದ್ಘಾಟಿಸುವರು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿರುವರು. ಕ.ಸಾ.ಪ.ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ವಕೀಲ ದಾಮೋದರ ಶೆಟ್ಟಿ, ಕಾಸರಗೋಡಿನ ಹಿರಿಯ ವಕೀಲ ಐ.ವಿ.ಭಟ್‍ಹಾಗೂ ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ ಕೆ. ಮುರಳೀಧರ ಬಳ್ಳಕ್ಕುರಾಯ ಪಾಲ್ಗೊಳ್ಳುವರು. ಕಾರ್ಯಕ್ರಮದ ಅಂಗವಾಗಿ ಗಮಕ ಕಲಾಧರೆ ಕು. ಶ್ರದ್ಧಾ ಭಟ್ ನಾಯರ್ಪಳ್ಳ ಅವರಿಂದ 'ಶ್ರೀರಾಮ ನಿರ್ಯಾಣ'ಎಂಬ ಹರಿಕಥಾ ಕಾಲಕ್ಷೇಪ ನಡೆಯುವುದು. 4.30ರಿಂದ ಕುಮಾರವ್ಯಾಸ ಭಾರತದಿಂದ ಆಯ್ದ 'ಕರ್ಣ ಭೇದನ'ಎಂಬ ಕಥಾಭಾಗದ ವಾಚನ-ವ್ಯಾಖ್ಯಾನ ನಡೆಯುವುದು. ವ್ಯಾಖ್ಯಾನವನ್ನು ಕೊಚ್ಚಿಗೋಪಾಲಕೃಷ್ಣ ಭಟ್ ಹಾಗೂ ಪೆಲ್ತಾಜೆ ಶ್ರೀಹರಿ ಭಟ್ ನೆರವೇರಿಸಲಿರುವರು.
ಅ. 9ರಂದು ಬೆಳಗ್ಗೆ 9ಕ್ಕೆ ಕರ್ನಾಟಕಯಕ್ಷಗಾನ ಎಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಯಕ್ಷಗಾನಎಕಾಡೆಮಿಯ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಭಾಗವಹಿಸುವರು. ಡಾ. ವೆಂಕಟಗಿರಿ, ಕಾಸರಗೋಡು ಚಿನ್ನಾ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಮಾರೋಪ ಸಮಾರಂಭದಲ್ಲಿ ಡಾ. ಯು.ಮಹೇಶ್ವರಿ ಅವರು ಸಮಾರೋಪ ಭಾಷಣ ಮಾಡುವರು. ಟಿ.ಶಂಕರನಾರಾಯಣಭಟ್ ಅಧ್ಯಕ್ಷತೆ ವಹಿಸುವರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು,ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಗಮಕ ಕಲಾ ಪರಿಷತ್‍ನಿಂದ ಕಾಸರಗೋಡಿನಲ್ಲಿ 'ಕಲೋಪಾಸನೆ' ವಿಶಿಷ್ಟ ಕರ್ಯಕ್ರಮ
0
ಅಕ್ಟೋಬರ್ 04, 2022
Tags