ಮಂಜೇಶ್ವರ: ಮಧೂರು ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ( ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಗೃಹ) ಶ್ರೀ ಧನ್ವಂತರಿ ಜಯಂತಿ ಆಚರಣೆ ಪ್ರಯುಕ್ತ ಅ. 22 ರಂದು ಪೂರ್ವಾಹ್ನ 10:30 ಕ್ಕೆ, ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘದ ಸಹಕಾರದೊಂದಿಗೆ ಮೀಯಪದವಿನ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ 'ಶಿವಾನುಗ್ರಹ' ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಮತ್ತು ಮೃದಂಗದಲ್ಲಿ ಮುರಳೀಮಾಧವ ಮಧೂರು ಭಾಗವಹಿಸುವರು.
ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ ತಾಳಮದ್ದಳೆ
0
ಅಕ್ಟೋಬರ್ 20, 2022
Tags