ಕುಂಬಳೆ: ಸಾಕ್ಷ್ಯ ತೋರಿಸಿದರೂ ಆರೋಪಿಯ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ವ್ಯಾಪಾರಿಯೋರ್ವರು ಎಸ್ಪಿಗೆ ದೂರು ಸಲ್ಲಿಸಿರುವುದಾಗಿ ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕುಬಣೂರಿನಲ್ಲಿ ಹಳೆ ಮರಗಳ ವ್ಯಾಪಾರ ನಡೆಸುವ ಹೊಸಂಗಡಿಯ ನಾಸೀರ್ ಎಂಬುವರು ಜಿಲ್ಲಾ ಪೋಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಹಳೆ ಮನೆಗಳನ್ನು ಖರೀದಿಸಿ ಕೆಡವಿ ಮರ, ಸ್ಟೀಲ್ ಇತ್ಯಾದಿ ವ್ಯಾಪಾರ ಮಾಡುತ್ತಿದ್ದ ಪಿರ್ಯಾದಿದಾರರು ಆರು ತಿಂಗಳ ಹಿಂದೆ ಕುಬಣೂರಿನ ಶಫೀಕ್ ಎಂಬುವರ ಕಟ್ಟಡದಲ್ಲಿ ತಿಂಗಳಿಗೆ 5000 ರೂ.ಗೆ ರೂಂ ಬಾಡಿಗೆ ಪಡೆದು ಗೋದಾಮು ಮಾಡಿಕೊಂಡಿದ್ದರು. ಚಂದ್ರ ಆಚಾರಿ ಮತ್ತು ಉಮರ್ ಶಫೀಕ್ ಅವರನ್ನು ಪರಿಚಯಿಸಿದರು. ಅಲ್ಲದೇ ಅಂಗಡಿಯಲ್ಲಿ ಸ್ಥಳಾವಕಾಶ ಕಡಿಮೆ ಇದ್ದ ಕಾರಣ ಶಫೀಕ್ ಅವರ ಅನುಮತಿ ಪಡೆದು ಅಂಗಡಿ ಪಕ್ಕದಲ್ಲಿ ಶೆಡ್ ನಿರ್ಮಿಸಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಈ ಶೆಡ್‍ಗೆ ತಿಂಗಳಿಗೆ 7,000 ರೂ.ಬಾಡಿಗೆ ನೀಡುತ್ತಿದ್ದರು.
ಇತ್ತೀಚಿಗೆ ಗೋಡೌನ್‍ನಿಂದ ಸರಕುಗಳು ನಾಪತ್ತೆಯಾಗುತ್ತಿದ್ದರಿಂದ ರಾತ್ರಿ ವೇಳೆ ಗೋಡೌನ್ ಸಮೀಪವೇ ತಂಗಿದ್ದರು. ಇದೇ ವೇಳೆ ಇತ್ತೀಚೆಗೆ ಒಂದು ರಾತ್ರಿ ಕೆಲವರು ಕಾರಿನಲ್ಲಿ ಬಂದು ಬೆದರಿಕೆ ಹಾಕಿರುವುದಾಗಿ ನಾಸೀರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮರುದಿನ ರಾತ್ರಿ ಪಕ್ಕದ ಕೊಠಡಿಯಲ್ಲಿ ಮಲಗಿದ್ದಾಗ ವಾಹನ ಬರುವ ಸದ್ದು ಕೇಳಿದ್ದು, ನಂತರ ವಾಹನಕ್ಕೆ ಸಾಮಗ್ರಿಗಳನ್ನು ತುಂಬುವ ಸದ್ದು ಕೇಳಿದೆ ಎನ್ನಲಾಗಿದೆ. ಮರುದಿನ ಬೆಳಿಗ್ಗೆ, ನೋಡಿದಾಗ ಕೆಲವು ಮರಗಳು ಕಾಣೆಯಾಗಿದ್ದವು. ಬಳಿಕ ಕೆಲವು ದಿನಗಳ ಬಳಿಕ ಅವರು ಉಮ್ಮರ್ ವಾಹನದಲ್ಲಿ ಕೆಲವು ಹಳೆಯ ಮರಗಳನ್ನು ತನ್ನ ಗೋಡೌನ್ ಪಕ್ಕದಲ್ಲಿರುವ ಚಂದ್ರ ಆಚಾರಿ ಅವರ ಅಂಗಡಿಗೆ ತಂದರು. ಮರಗಳನ್ನು ಎಲ್ಲಿಂದ ತರಲಾಗಿದೆ ಎಂದು ಉಮರ್ ಅವರನ್ನು ಕೇಳಿದಾಗ, ಅವರು ತಮ್ಮ ಗೋಡೌನ್‍ನಿಂದ ಮರಗಳು ಕಾಣೆಯಾಗಿರುವುದು ಮನವರಿಕೆಯಾದ ಕಾರಣ ಸ್ಪಷ್ಟ ಉತ್ತರ ನೀಡದೆ ನುಣುಚಿಕೊಂಡರು ಎಂದು ನಜೀರ್ ಹೇಳಿದ್ದಾರೆ.
ಬಳಿಕ ಕುಂಬಳೆ ಪೋಲೀಸರಿಗೆ ದೂರು ನೀಡಲಾಗಿತ್ತು. ತನಿಖೆಯ ಭಾಗವಾಗಿ, ಅಧಿಕಾರಿಯೊಬ್ಬರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಸ್ಥಳಕ್ಕೆ ತಲುಪಿದ್ದರು ಮತ್ತು ಮರುದಿನ ಠಾಣೆಗೆ ಹಾಜರಾಗುವಂತೆ ಹೇಳಿದರು. ದೂರಿನ ಪ್ರಕಾರ ಠಾಣೆಗೆ ಹೋದಾಗ ಮತ್ತೊಬ್ಬ ಅಧಿಕಾರಿ ತನ್ನನ್ನೇ ಆರೋಪಿಯಂತೆ ಮಾತನಾಡಿಸಿ ಕಾರಿನ ಕೀಲಿಕೈ ವಶಕ್ಕೆ ಪಡೆದರು. ಆ ಬಳಿಕ ಕನ್ನಟಿಪಾರೆ ಮುಹಮ್ಮದ್ ನೇತೃತ್ವದ ತಂಡ ಅಂಗಡಿಗೆ ಬಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.ಈ ನಿಟ್ಟಿನಲ್ಲಿ ಎಸ್.ಪಿ.ಯವರಿಗೆ ದೂರು ನೀಡುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಾಸೀರ್ ಮತ್ತು ಸಿರಾಜ್ ಪಚ್ಚಂಬಳ ಉಪಸ್ಥಿತರಿದ್ದರು.
ಸಾಕ್ಷ್ಯ ತೋರಿಸಿದರೂ ಪ್ರಕರಣ ದಾಖಲಿಸದ ಪೋಲೀಸರು: ಎಸ್ಪಿಗೆ ದೂರು
0
ಅಕ್ಟೋಬರ್ 15, 2022
Tags