ಕೋಝಿಕ್ಕೋಡ್: ಮಹಿಳೆಯೊಬ್ಬರ ಉದರದಲ್ಲಿ ಕತ್ತರಿ ಬಾಕಿಯಾಗಿಸಿದ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಅಧೀಕ್ಷಕರಿಂದ ಆಯೋಗ ವರದಿ ಕೇಳಿದೆ. 15 ದಿನಗಳಲ್ಲಿ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ.
ಘಟನೆ ವಿವಾದವಾದ ನಂತರ, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ತನಿಖಾ ವರದಿ ಬಂದ ಬಳಿಕ ಆಸ್ಪತ್ರೆ ಅಧಿಕಾರಿಗಳು ಈ ಬಗ್ಗೆ ಅಧಿಕೃತ ವಿವರಣೆ ನೀಡಲಿದ್ದಾರೆ. ಪ್ರಸ್ತುತ, ಆಸ್ಪತ್ರೆಯು ಮಹಿಳೆಯ ಆರೋಪವನ್ನು ನಿರಾಕರಿಸಿಲ್ಲ ಅಥವಾ ಸ್ವೀಕರಿಸಿಲ್ಲ.
ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಿಸೇರಿಯನ್ ವೇಳೆ ಕತ್ತರಿ ಸಿಕ್ಕಿಹಾಕಿಕೊಂಡಿದೆ ಎಂದು ಮಹಿಳೆಯ ಮನೆಯವರು ಹೇಳುತ್ತಾರೆ. ಆದರೆ ಸಿಸೇರಿಯನ್ ನಂತರ ಮಹಿಳೆಯು ಹಲವಾರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ, ಆಸ್ಪತ್ರೆಯ ಯಾವ ವಿಭಾಗವು ತಪ್ಪೆಸಗಿದೆ ಎಂಬುದು ಸ್ಪಷ್ಟವಾಗಿಲ್ಲ. ಹಲವು ದಿನಗಳಿಂದ ಯುವತಿ ಹೊಟ್ಟೆಯಲ್ಲಿ ಕತ್ತರಿ ಸಿಲುಕಿರುವುದು ತಿಳಿಯದೇ ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ.
ಯುವತಿ ಉದರದಲ್ಲಿ ಬಾಕಿಯಾದ ಕತ್ತರಿ: ಮಾನವ ಹಕ್ಕುಗಳ ಆಯೋಗದಿಂದ ಪ್ರಕರಣ ದಾಖಲು
0
ಅಕ್ಟೋಬರ್ 10, 2022