HEALTH TIPS

ತನ್ನ ಆದಾಯ ತಿಳಿಸಲು ನಿರಾಕರಿಸಿದ ಪತಿ, ಆರ್ ಟಿಐ ಮೂಲಕ ಗಂಡನ ಆದಾಯದ ವಿವರ ಪಡೆದ ಪತ್ನಿ!

Top Post Ad

Click to join Samarasasudhi Official Whatsapp Group

Qries

 

                 ಬರೇಲಿ: ನೀವು ಎಷ್ಟು ಸಂಪಾದಿಸುತ್ತೀರಿ? ಅಂತ ಯಾರನ್ನಾದ್ರೂ ಕೇಳಿದ್ರೆ, ಅದೆಲ್ಲಾ ನಿಮಗ್ಯಾಕೆ? ಎಷ್ಟೋ ಸಂಪಾದಿಸ್ತೀವಿ. ನಿಮ್ಗೆಲ್ಲಾ ಹೇಳಲ್ಲ ಅನ್ನೋ ಉತ್ತರ ಸಿಗಬಹುದು. ಯಾಕಂದ್ರೆ ಇಂತಹ ವಿಚಾರಗಳನ್ನ ಯಾರೂ ಸಾರ್ವಜನಿಕವಾಗಿ ಹಂಚಿಕೊಳ್ಳಲ್ಲ. ಹೆಚ್ಚಿನವರು ಎಲ್ಲರೊಂದಿಗೆ ಚರ್ಚಿಸಲು ಇಷ್ಟಪಡುವುದಿಲ್ಲ. ಅಂತಹ ಮಾಹಿತಿಯನ್ನು ಸಾಮಾನ್ಯವಾಗಿ ಕುಟುಂಬದ ಸದಸ್ಯರಿಗೆ ಮಾತ್ರ ಬಹಿರಂಗಪಡಿಸಲಾಗುತ್ತದೆ. ಆದಾಗ್ಯೂ ವೈವಾಹಿಕ ವಿವಾದದ ಸಂದರ್ಭದಲ್ಲಿ ಇಂತಹ ವಿಷಯಗಳು ವಿಭಿನ್ನವಾಗಿವೆ. ಆರ್ ಟಿಐ ಅಡಿ ಗಂಡನ ಆದಾಯದ ವಿವರವನ್ನೂ ಪಡೆಯಬಹುದಾಗಿದೆ.

                     ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ, ಭಾವನಾತ್ಮಕ ಸವಾಲುಗಳ ಜೊತೆಗೆ ನಿಮ್ಮ ಹಣಕಾಸು ಸಹ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಆಸ್ತಿಗಳನ್ನು ಇಬ್ಬರ ನಡುವೆ ವಿಂಗಡಿಸಲಾಗುತ್ತೆ. ಆದರೆ ವಿಚ್ಛೇದನವು ಪರಸ್ಪರ ಒಪ್ಪಿಗೆ ಮೇರೆಗೆ ಇಲ್ಲದಿದ್ದಾಗ, ಕೆಲವು ಸಂದರ್ಭಗಳಲ್ಲಿ, ಹೆಂಡತಿಯು ತನ್ನ ಪತಿಯಿಂದ ಆದಾಯದ ವಿವರಗಳನ್ನು ಮತ್ತು ಜೀವನಾಂಶವನ್ನು ಕೇಳಬಹುದು.

                   ಇಲ್ಲಿ ಪುರುಷನು ಆದಾಯದ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರೆ, ಹೆಂಡತಿ ಇತರ ಮಾರ್ಗಗಳ ಮೂಲಕ ಆದಾಯದ ಮಾಹಿತಿ ಪಡೆಯಬಹುದು. ಮಹಿಳೆಯೊಬ್ಬರು RTI (ಮಾಹಿತಿ ಹಕ್ಕು) ಅರ್ಜಿ ಸಲ್ಲಿಸುವ ಮೂಲಕ ತನ್ನ ಪತಿಯ ಆದಾಯದ ವಿವರಗಳನ್ನು ಕೋರಿದ ಪ್ರಸಂಗ ಇತ್ತೀಚಿಗೆ ವರದಿಯಾಗಿದೆ.

               ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ) ತನ್ನ ಇತ್ತೀಚಿನ ಆದೇಶದಲ್ಲಿ ಮಹಿಳೆಗೆ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ಸಾಮಾನ್ಯ ವಿವರಗಳನ್ನು 15 ದಿನಗಳೊಳಗೆ ಒದಗಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

                     ಸಂಜು ಗುಪ್ತಾ ಎಂಬ ಮಹಿಳೆ ತನ್ನ ಸಂಗಾತಿಯ ಆದಾಯದ ವಿವರಗಳನ್ನು ಕೋರಿ ಆರ್‌ಟಿಐ ಸಲ್ಲಿಸಿದ ನಂತರ ಈ ಆದೇಶ ಬಂದಿದೆ. ಆರಂಭದಲ್ಲಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ(CPIO), ಆದಾಯ ತೆರಿಗೆ ಅಧಿಕಾರಿ, ಬರೇಲಿಯ ಆದಾಯ ತೆರಿಗೆ ಇಲಾಖೆ ಕಚೇರಿಯು ಪತಿಯ ಒಪ್ಪಿಗೆ ಇಲ್ಲದ ಕಾರಣದಿಂದ RTI ಅಡಿಯಲ್ಲಿ ವಿವರಗಳನ್ನು ನೀಡಲು ನಿರಾಕರಿಸಿದರು ಎಂದು ವರದಿಯಾಗಿದೆ.

                       ನಂತರ ಮಹಿಳೆ ಮೇಲ್ಮನವಿ ಸಲ್ಲಿಸುವ ಮೂಲಕ ಮೊದಲ ಮೇಲ್ಮನವಿ ಪ್ರಾಧಿಕಾರದಿಂದ(ಎಫ್‌ಎಎ) ಸಹಾಯವನ್ನು ಕೋರಿದರು. ಆದಾಗ್ಯೂ, FAA CPIO ನ ಆದೇಶವನ್ನು ಎತ್ತಿಹಿಡಿದಿದೆ. CICಗೆ ಎರಡನೇ ಮೇಲ್ಮನವಿ ಸಲ್ಲಿಸಲು ಸಂಜು ಗುಪ್ತಾ ಅವರನ್ನು ಪ್ರೇರೇಪಿಸಿತು.

             ಕೇಂದ್ರ ಮಾಹಿತಿ ಆಯೋಗವು ತನ್ನ ಹಿಂದಿನ ಕೆಲವು ಆದೇಶಗಳು ಮತ್ತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ತೀರ್ಪುಗಳನ್ನು ಪರಿಶೀಲಿಸಿತು ಮತ್ತು ಸೆಪ್ಟೆಂಬರ್ 19, 2022 ರಂದು ತನ್ನ ಆದೇಶವನ್ನು ನೀಡಿದೆ.

                    ಸ್ವೀಕರಿಸಿದ ದಿನಾಂಕದಿಂದ 15 ದಿನಗಳಲ್ಲಿ ಸಾರ್ವಜನಿಕ ಪ್ರಾಧಿಕಾರದಲ್ಲಿ ಲಭ್ಯವಿರುವ ತನ್ನ ಪತಿಯ ನಿವ್ವಳ ತೆರಿಗೆಯ ಆದಾಯ/ಒಟ್ಟು ಆದಾಯದ ವಿವರಗಳನ್ನು ಪತ್ನಿಗೆ ಒದಗಿಸುವಂತೆ ಅದು CPIO ಗೆ ನಿರ್ದೇಶಿಸಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries